ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಉದ್ಘಾಟನೆ! 750ಕ್ಕೂ ಹೆಚ್ಚು ಪುಸ್ತಕಗಳ ಬೃಹತ್‌ ಪ್ರದರ್ಶನ!!

ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ರ) ಇದರ ವತಿಯಿಂದ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆಯನ್ನು ಶನಿವಾರ ಅಧಿಕೃತವಾಗಿ ಉದ್ಘಾಟಿಸಲಾಯಿತು.

Advertisement

ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ ಅವರು ಸ್ನಾತಕೋತ್ತರ (ಪಿಜಿ) ಗ್ರಂಥಾಲಯದಲ್ಲಿ 10 ದಿನಗಳ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸುವ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಿದರು. ಈ ಪ್ರದರ್ಶನದಲಿ ಖ್ಯಾತ ಲೇಖಕರ ಕಲೆ, ಸಾಹಿತ್ಯ, ಜೀವನಚರಿತ್ರೆ, ವ್ಯಕ್ತಿತ್ವ ವಿಕಸನ ಹಾಗೂ ಕೆಎಎಸ್ (KAS), ಐಎಎಸ್ (IAS), ಬ್ಯಾಂಕಿಂಗ್, ಆ‌ರ್ ಆರ್‌ಬಿ (RRB), ಪೊಲೀಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ 750ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

Advertisement

ಉದ್ಘಾಟನಾ ಭಾಷಣ ಮಾಡಿದ ಡಾ. ವಿಜಯಕುಮಾರ್ ಎಂ ಅವರು ವಿದ್ಯಾರ್ಥಿಗಳಲ್ಲಿ ಓದುವ ಮತ್ತು ಬರೆಯುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ನವೆಂಬರ್ ತಿಂಗಳನ್ನು ಕಾಲೇಜಿನಲಿ, ‘ಗ್ರಂಥಾಲಯ ಮಾಸ’ವನ್ನಾಗಿ ಆಚರಿಸುವ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳು ಮೊಬೈಲ್ ಫೋನ್‌ಗಳು ಮತ್ತು ಆನ್‌ಲೈನ್ ಗೇಮ್ಗಳಿಂದ ದೂರವಿದ್ದು, ಪುಸ್ತಕಗಳ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿ, ಪುಸ್ತಕಗಳ ಓದು ಸಮಾಜದಲ್ಲಿ ಮುನ್ನಡೆಯಲು ಮತ್ತು ಯಶಸ್ಸು ಸಾಧಿಸಲು ಅಗತ್ಯವಾದ ಅಮೂಲ್ಯ, ಒಳನೋಟಗಳು ಹಾಗೂ ದೃಷ್ಟಿಕೋನಗಳನ್ನು ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಸಪ್ತಾಹದ ಪೂರ್ವಭಾವಿಯಾಗಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಿಂದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಕ್ಟೋಬರ್ 5ರಂದು ಪ್ರದರ್ಶನ ಕಲಾ ಸಂಘದ ಸಹಯೋಗದಲ್ಲಿ ಇಂಗ್ಲಿಷ್ ಭಾಷಣ ಸ್ಪರ್ಧೆ ಮತ್ತು ಅಕ್ಟೋಬರ್ 22ರಂದು ಹಿಂದಿ ವಿಭಾಗದ ಸಹಯೋಗದಲ್ಲಿ ಹಿಂದಿ ಭಾಷಣ ಸ್ಪರ್ಧೆ ನಡೆಸಲಾಗಿತ್ತು.

ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ, ಐಕ್ಯೂಎಸಿ ಸಂಯೋಜಕ ಹಾಗೂ ಹಣಕಾಸು ಅಧಿಕಾರಿ ಡಾ. ಎಡ್ರಿನ್ ಡಿ’ಸೋಜಾ, ಕಚೇರಿ ಅಧೀಕ್ಷಕಿ ರುಫಿನಾ ಡಿ’ಸೋಜಾ, ಪ್ರಾಧ್ಯಾಪಕರು ಹಾಗೂ ಗ್ರಂಥಾಲಯ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಆಯ್ಕೆ ಶ್ರೇಣಿ ಗ್ರಂಥಪಾಲಕ ಅಬ್ದುಲ್ ರೆಹಮಾನ್ ಜಿ. ಸ್ವಾಗತಿಸಿದರು. ಪಿ.ಜಿ ಗ್ರಂಥಪಾಲಕ ಮನೋಹರ್ ಎಸ್.ಜಿ. ವಂದಿಸಿದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಶ್ರೀಮಣಿ ನಿರೂಪಿಸಿದರು. ಗ್ರಂಥಾಲಯ ಸಿಬ್ಬಂದಿ ಝೀಟಾ ನೊರೊನಾ, ಕ್ಯಾಥರೀನ್ ಕ್ರಾಸ್ತಾ ಹಾಗೂ ಪ್ರಥಮ ಎಂಎಸ್ ಡಬ್ಲ್ಯೂ ವಿದ್ಯಾರ್ಥಿಗಳು ಪ್ರದರ್ಶನದ ವ್ಯವಸ್ಥೆಗೆ ಸಹಕರಿಸಿದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page