ಇತ್ತೀಚೆಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಭಾಗವಾಗಿ ಪುನೀತ್ ಕ್ರಾಸ್ ಎಕ್ಸಾಮಿನೇಷನ್ ನಡೆಯುವಾಗ ದಿಢೀರ್ ಬೆಳವಣಿಗೆ ಒಂದು ನಡೆದಿತ್ತು. ಸ್ವಲ್ಪ ಹೊತ್ತಿಗೆ ವಿಡಿಯೋ ಕಾನ್ಫರೆನ್ಸ್ನ ವಿಡಿಯೋ ಆಫ್ ಆಗಿತ್ತು. ಆ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಮಾತನಾಡಿದ್ದರು.
ದರ್ಶನ್ ಹಾಗೂ ಪವಿತ್ರಾ ಗೌಡ ಅವರು ವಿಡಿಯೋ ಕಾನ್ಫರೆನ್ಸ್ ಆಫ್ ಆಗಿದೆ ಎಂದು ಪರಸ್ಪರ ಮಾತನಾಡಿದ್ದು ಅವರ ಮಾತುಗಳು ಕಾಲ್ನಲ್ಲಿದ್ದ ಇತರರಿಗೆ ಗೊತ್ತಾಗಿದೆ. ಅಷ್ಟೇ ಅಲ್ಲದೆ ಅವರ ಮಾತುಗಳು ತಕ್ಷಣವೇ ವೈರಲ್ ಆದವು. ವಿಜಯಲಕ್ಷ್ಮಿ ಬರ್ತ್ಡೇ ಸಂದರ್ಭದಲ್ಲಿ ಈ ರೀತಿ ನಡೆದಿದ್ದು ಇನ್ನೂ ಶಾಕಿಂಗ್ ಆಗಿತ್ತು. ಈ ಎಲ್ಲ ಬೆಳವಣಿಗೆ ಮಧ್ಯೆ ವಿಜಯಲಕ್ಷ್ಮಿ ಯಾವಾಗ ಪ್ರತಿಕ್ರಿಯಿಸ್ತಾರೆ ಎಂದು ಎಲ್ಲರೂ ಕಾಯುತ್ತಿದ್ದರು. ಇದೀಗ ಅವರು ಈ ಘಟನೆ ನಂತರ ಮೊದಲ ಇನ್ಸ್ಟಾಗ್ರಾಮ್ ಸ್ಟೋರಿ ಶೇರ್ ಮಾಡಿದ್ದಾರೆ. ಇದರಲ್ಲಿ ಮಾರ್ಮಿಕವಾದ ಅರ್ಥ ಬರುವ ಮಾತೊಂದಿದೆ.
ನಿಮಗೆ ದ್ರೋಹ ಬಗೆಯೋದು ನಿಮ್ಮ ಶತ್ರುಗಳಲ್ಲ, ಬದಲಾಗಿ ನಿಮ್ಮ ಜೊತೆಯಲ್ಲೇ ಉಂಡವರು ಎಂದು ಬರೆದ ರೀಲ್ಸ್ ವಿಜಯಲಕ್ಷ್ಮಿ ಶೇರ್ ಮಾಡಿದ್ದಾರೆ. ಇದನ್ನು ಅವರು ದರ್ಶನ್ಗೆ ಹೇಳಿದ್ರಾ ಎನ್ನುವ ಸಂದೇಹ ಮೂಡುವ ಹಾಗಾಗಿದೆ. ವಿಬೋದ್ & ವಿನೀಶ್ ದರ್ಶನ್ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಮಾಡಿದ ವಿಡಿಯೋವನ್ನು ವಿಜಯಲಕ್ಷ್ಮಿ ಅವರು ಇನ್ಸ್ಟಾ ಸ್ಟೋರಿ ಹಾಕಿದ್ದಾರೆ. ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಸಿ ಮೂಲಕ ವಿಚಾರಣೆಯಲ್ಲಿ ಜೈಲಿನಿಂದಲೇ ಹಾಜರಿದ್ದ ವೇಳೆ ದರ್ಶನ್ ಮತ್ತು ಪವಿತ್ರಾಗೌಡ ಎಡವಟ್ಟು ಮಾಡಿಕೊಂಡಿದ್ದಾರೆ. ಈಗ ಆ ಆಡಿಯೋ ಅಸ್ತ್ರವೇ ದೊಡ್ಡ ಸವಾಲಾಗುವ ಸಾಧ್ಯತೆ ಇದೆ.
ದರ್ಶನ್ ಮಾತಿನ ಚರ್ಚೆಯೇ ಈಗ ಪ್ರಾಸಿಕ್ಯೂಷನ್ ಗೆ ಅಸ್ತ್ರವಾಗಿದ್ದು, ಎಸ್ ಪಿಪಿ ಇದನ್ನು ನ್ಯಾಯಧೀಶರ ಗಮನಕ್ಕೆ ತರಲು ಮುಂದಾಗಿದ್ದಾರೆ ಎನ್ನಲಾಗಿದೆ. ಇಬ್ಬರ ಮಾತಿನ ರೆಕಾರ್ಡ್ ಕ್ಲಿಪ್ ನ್ನ ಬಹುತೇಕ ನ್ಯಾಯಧೀಶರಿಗೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.












