ವಿಟ್ಲ : ವಿನೂತನ ಯುವಕ ಮಂಡಲ (ರಿ) ಬೊಳಂತಿಮೊಗರು ಇದರ 24ನೇ ವರ್ಷದ ದಸರಾ ಕ್ರೀಡಾಕೂಟ ನಡೆದಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬೊಳಂತಿಮೊಗರಿನ ಪಿ.ಯಂ ಶಾಲೆಯ ಶಿಕ್ಷಕ ಚಂದ್ರಶೇಖರ ನೆರವೇರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷೆ ದೇವಕಿ ನಾಯ್ತೋಟ್ಟು ವಹಿಸಿದ್ದರು. ಬೊಳಂತಿಮೊಗರು ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು ಹಾಗೂ 14 ವರ್ಷ ವಯೋಮಿತಿಯ ರಿಲೇ ಹಾಗೂ ಖೋಖೋ ಪಂದ್ಯಾಟದ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅತಿಥಿಗಳಾಗಿ ಇಂದಿರಾ ಅಡ್ಡಾಳಿ, ಚರಣ್ ಪಡೀಲ್, ವಸಂತಿ ದರ್ಖಾಸು ಉಪಸ್ಥಿತರಿದ್ದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟದಲ್ಲಿ ವಿಜಯಿಯಾದವರಿಗೆ ಬಹುಮಾನ ವಿತರಿಸಲಾಯಿತು. ಊರಿನ ಜೂನಿಯರ್ ಲೈನ್ ಮ್ಯಾನ್ ಹನುಮಂತು ಹಾಗೂ ಸಮಾಜ ಸೇವಕ ಪ್ರವೀಣ್ ಡಿಸೋಜ ಅವರನ್ನು ಗೌರವಿಸಲಾಯಿತು. ಪಿಎಂ ಶ್ರೀ ಶಾಲೆಯ ಮುಖ್ಯೋಪಾಧ್ಯಾಯ ಇಸ್ಮಾಯಿಲ್ ಅವರು ಸಮಾರೋಪದ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ್ ಕಾಯರ್ ಮಾರ್, ಶುಕರಾಜ್, ನಮಿತಾ ಬೊಡ್ಡೋಣಿ, ಹರೀಶ್ ಚಂದಪ್ಪಾಡಿ ಅತಿಥಿಗಳಾಗಿ ಭಾಗವಹಿಸಿದ್ದರು. ಪುರಂದರ ಅಂಚನ್ ಕಾರ್ಯಕ್ರಮ ನಿರೂಪಿಸಿದರು, ಅಧ್ಯಕ್ಷರಾದ ಪ್ರವೀಣ್ ರಾಜ್ ಕಾಮಟ ಪ್ರಸ್ತಾವಿಕ ಮಾತನಾಡಿದರು. ಯುವಕ ಮಂಡಲದ ಕಾರ್ಯದರ್ಶಿ ನಿತಿನ್ ಬೊಡ್ಡೋಣಿ ಸ್ವಾಗತಿಸಿದರು ಹಾಗೂ ದಿನೇಶ್ ಮಾಡ್ತೇಲ್ ವಂದಿಸಿದರು. ಯುವಕ ಮಂಡಲದ ಗೌರವಾಧ್ಯಕ್ಷರು ನವೀನ್ಚಂದ್ರ ನಡುವಡ್ಕ, ಕ್ರೀಡಾಕಾರ್ಯದರ್ಶಿ ತಿಲಕ್ ಮಾಡ್ತೇಲ್, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ನಾಯ್ತೋಟ್ಟು , ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಕ್ರೀಡಾಪ್ರೇಮಿಗಳು ಸೇರಿದಂತೆ ಕ್ರೀಡಾಪಟುಗಳು ಉಪಸ್ಥಿತಿದ್ದರು













