ಬಾಂಬೆ ಹೈಕೋರ್ಟ್‌ನಲ್ಲಿ ಬಿ.ಆರ್‌. ಶೆಟ್ಟಿ!!! ಬ್ಯಾಂಕ್‌ ಆಫ್ ಬರೋಡಾ ವಿರುದ್ಧ 1.44 ಲಕ್ಷ ಕೋಟಿ ರೂ ಮೊಕದ್ದಮೆ!

ಬ್ಯಾಂಕ್‌ ಆಫ್ ಬರೋಡಾ ಮತ್ತಿತರರ ವಿರುದ್ಧ ಬೃಹತ್‌ 15 ಬಿಲಿಯನ್ ಡಾಲರ್ ಮೊಕದ್ದಮೆಯನ್ನು ಎನ್‌ಎಂಸಿ ಹೆಲ್ತ್‌ಕೇ‌ರ್ ಸಂಸ್ಥಾಪಕ ಬಿ.ಆರ್. ಶೆಟ್ಟಿ ಬಾಂಬೆ ಹೈಕೋರ್ಟ್‌ನಲ್ಲಿ ಹೂಡಿದ್ದಾರೆ. ಈ ಬೆಳವಣಿಗೆಯ ನಡುವಯೇ ವಹಿವಾಟಿನಲ್ಲಿ ಶೇ. 3ರಷ್ಟು ಸರ್ಕಾರಿ ಬ್ಯಾಂಕ್‌ನ ಷೇರು ಮೌಲ್ಯವು ಕುಸಿದಿದೆ.

Advertisement

ಬ್ಯಾಂಕ್ ಆಫ್‌ ಬರೋಡಾದ ಅಧಿಕಾರಿಗಳು ತಮ್ಮ ಕಂಪೆನಿಗಳಿಗೆ ಸಂಬಂಧಿಸಿದ ವಂಚನೆಯ ವಹಿವಾಟುಗಳಿಗೆ ಸಹಕರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ನಡೆಯುತ್ತಿದೆ ಎಂಬ ದೂರುಗಳನ್ನು ಸರಿಯಾಗಿ ವಿಚಾರಿಸಲು ಬ್ಯಾಂಕ್ ವಿಫಲವಾಯಿತು ಎಂಬ ಆರೋಪ ಕೇಳಿಬಂದಿದೆ.
ಅಷ್ಟೇ ಅಲ್ಲ, ತಮ್ಮ ಸಹಿಯನ್ನು ನಕಲುಗೊಳಿಸಿ ನೀಡಲಾದ ಪರ್ಸನಲ್ ಗ್ಯಾರಂಟಿಗಳನ್ನು ಬಳಸಿ ಸಾಲಗಳನ್ನು ಪಡೆಯಲಾಗಿದೆ ಎಂದು ಶೆಟ್ಟಿ ಆರೋಪಿಸಿದ್ದಾರೆ. ಸಂಬಂಧಪಟ್ಟ ಬ್ಯಾಂಕ್ ದಾಖಲೆಗಳು ಹಾಗೂ ಆಂತರಿಕ ನಿಯಮಗಳ ದಾಖಲೆಗಳನ್ನು ಬಹಿರಂಗಪಡಿಸಬೇಕೆಂದೂ ಅವರು ಒತ್ತಾಯಿಸಿದ್ದಾರೆ.
ಈ ಅಕ್ರಮ ವಹಿವಾಟುಗಳಿಂದ ತಮಗೆ ಹಾಗೂ ತಮ್ಮ ಸಂಸ್ಥೆಗಳಿಗೆ ಆಗಿರುವ ನೇರ ನಷ್ಟಕ್ಕೆ 5 ಬಿಲಿಯನ್ ಡಾಲರ್, ವ್ಯಾಪಾರ ಅವಕಾಶಗಳ ನಷ್ಟಕ್ಕೆ 5 ಬಿಲಿಯನ್ ಡಾಲರ್, ಹಾಗೂ ಮಾರುಕಟ್ಟೆಯಲ್ಲಿ ಉಂಟಾದ ಅಪಕೀರ್ತಿಗೆ ಪರಿಹಾರವಾಗಿ 5 ಬಿಲಿಯನ್ ಡಾಲರ್, ಹೀಗೆ ಒಟ್ಟು 15 ಬಿಲಿಯನ್ ಡಾಲರ್ ಮೊತ್ತದ ನಷ್ಟ ಪರಿಹಾರ ಕೊಡಿಸಬೇಕು, ಈ ಮೊತ್ತಕ್ಕೆ ವಾರ್ಷಿಕ ಶೇ. 18 ಬಡ್ಡಿಯನ್ನೂ ಒಳಗೊಳ್ಳಬೇಕು ಎಂದು ಕೋರಿ ಬಿಆ‌ರ್ ಶೆಟ್ಟಿ ಅವರು ಬಾಂಬೆ ಕೋರ್ಟ್‌ನಲ್ಲಿ ಮೊಕದ್ದಮೆ ಹಾಕಿದ್ದಾರೆ ಎಂದು ಜಾಲತಾಣ ಮೂಲಗಳು ವರದಿ ಮಾಡಿವೆ.

Advertisement

ಬಿಆ‌ರ್ ಶೆಟ್ಟಿ ಅವರ ಈ ಆರೋಪಗಳನ್ನು ಬ್ಯಾಂಕ್‌ ಆಫ್‌ ಬರೋಡಾ ಸಾರಾಸಗಟಾಗಿ ತಿರಸ್ಕರಿಸಿದೆ. ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಬ್ಯಾಂಕ್ ಆಫ್ ಬರೋಡಾ, ತಮಗೆ ಈವರೆಗೆ ಅಧಿಕೃತವಾಗಿ ಯಾವುದೇ ಮೊಕದ್ದಮೆಯ ಪ್ರತಿ ತಲುಪಿಲ್ಲ. ಅವರು ಮಾಡಿರುವ ಎಲ್ಲಾ ಆರೋಪಗಳಿಗೆ ಕೋರ್ಟ್‌ನಲ್ಲಿ ಸಮರ್ಥವಾಗಿ ಉತ್ತರ ಕೊಡುವುದಾಗಿ ಸ್ಪಷ್ಟಪಡಿಸಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page