ಪುತ್ತೂರು : ಆರ್ಯಾಪು ಗ್ರಾಮದ ದೊಡ್ಡಡ್ಕದ ಮಹಾಲಕ್ಷ್ಮೀ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವದ ಸಂಭ್ರದ ನಡುವೆ ಎರಡು ದಿನಗಳ ಹಿಂದೆ ದೇವಸ್ಥಾನಕ್ಕೆ ಸಂಬಂಧಪಟ್ಟ ಡಿವಿಡಿ ಪ್ಲೇಯರ್ ಮತ್ತು ಪೆನ್ ಡ್ರೈವ್ ಕಳವಾಗಿತ್ತು.
ನಂತರ ನಡೆದ ಬೆಳವಣಿಗೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಮತ್ತು ಭಕ್ತರು ಸಾರ್ವಜನಿಕ ಪ್ರಾರ್ಥನೆ ಸಲ್ಲಿಸಿ, ಕಳವಾಗಿರುವ ವಸ್ತು ಮರಳಿ ಕೈ ಸೇರುವಂತೆ ದೇವಿಯ ಬಳಿ ಪ್ರಾರ್ಥಿಸಿದ್ದರು.
ಇದೀಗ ಪವಾಡ ಎಂಬಂತೆ ಪ್ರಾರ್ಥನೆ ಸಲ್ಲಿಸಿದ ಮೂರು ದಿನದಲ್ಲೇ ಕಳ್ಳರು ಕಾಣೆಯಾದ ವಸ್ತುಗಳನ್ನು ಪುನಃ ದೇವಸ್ಥಾನದಲ್ಲೇ ಇಟ್ಟು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಇದೀಗ ಭಕ್ತರು ಸಂತಸ ವ್ಯಕ್ತಪಡಿಸಿ, ತಾಯಿ ತನ್ನ ಪವಾಡ ತೋರಿಸಿ ಊರನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಸದಾ ಕಾಯುತ್ತಾಳೆ ಎಂದಿದ್ದಾರೆ. ಒಟ್ಟಿನಲ್ಲಿ ಮಹಾಲಕ್ಷ್ಮೀ ದೇವಿಯ ಪವಾಡ ಇದೀಗ ಹತ್ತೂರಿಗೂ ಪಸರಿಸಿದೆ.













