ಸರ್ಕಾರಿ ನೌಕರರು ತಮ್ಮ ಆಸ್ತಿ ವಿವರ ಸಲ್ಲಿಸಿದರೆ ಮಾತ್ರ ಪ್ರಮೋಷನ್!!‌ ತಮಿಳುನಾಡು ಸರ್ಕಾರದ ಮಾಸ್ಟರ್‌ ಪ್ಲಾನ್‌!!

ತಮಿಳುನಾಡು : ಸರ್ಕಾರಿ ನೌಕರರ ಬಡ್ತಿ ವಿಚಾರದಲ್ಲಿ ತಮಿಳುನಾಡು ಸರ್ಕಾರವು ಮಹತ್ವದ ನಿಯಮ ಜಾರಿಗೆ ತಂದಿದೆ. ಸರ್ಕಾರವು ನೌಕರರು ತಮ್ಮ ಆಸ್ತಿ ಮತ್ತು ಹಣಕಾಸಿನ ವಿವರಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸಿದರೆ ಮಾತ್ರ ಬಡ್ತಿಗೆ ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಕಾರ್ಯದರ್ಶಿ ಸಾಯಿಕುಮಾರ್ ಅವರು ಇದಕ್ಕೆ ಸಂಬಂಧಿಸಿದ ಮುಖ್ಯ ಆದೇಶ ಹೊರಡಿಸಿದ್ದು, ನೌಕರರು ಈ ತಿಂಗಳ 31ರೊಳಗೆ ಎಲ್ಲ ಸಂಬಂಧಿತ ತಮ್ಮ ವಿವರಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

Advertisement

ನೌಕರರು ಸರ್ಕಾರದ ಆದೇಶದ ಪ್ರಕಾರ ತಮ್ಮ ಹೆಸರಿನಲ್ಲಿರುವ ಸ್ಥಿರಾಸ್ತಿ ಮತ್ತು ಚರಾಸ್ತಿ, ಉಳಿತಾಯ ಹಾಗೂ ಸಾಲಗಳ ಸಂಪೂರ್ಣ ವಿವರಗಳನ್ನು ಸಲ್ಲಿಸಬೇಕು. ಇದಕ್ಕಾಗಿ ಸರ್ಕಾರದ ಸಮಗ್ರ ಹಣಕಾಸು ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯ ವೆಬ್‌ಸೈಟ್ ಬಳಸಬೇಕಾಗಿದೆ. ಹಣಕಾಸಿನ ವಿವರಗಳನ್ನು ಒಂದೇ ವ್ಯವಸ್ಥೆಯಲ್ಲಿ ದಾಖಲಿಸುವ ಮೂಲಕ ನೌಕರರ ಆಸ್ತಿ ಮತ್ತು ಹೊಣೆಗಾರಿಕೆಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯುವುದು ಈ ಕ್ರಮದ ಉದ್ದೇಶವಾಗಿದೆ. ನೌಕರರು ತಮ್ಮ ಹಣದಿಂದ ಬೇರೆಯವರ ಹೆಸರಿನಲ್ಲಿ ಖರೀದಿಸಿರುವ ಆಸ್ತಿಗಳ ವಿವರಗಳನ್ನೂ ಘೋಷಿಸಬೇಕು. ಅಂತಹ ಆಸ್ತಿಯನ್ನು ಯಾರ ಹೆಸರಿನಲ್ಲಿ ಖರೀದಿಸಲಾಗಿದೆ ಮತ್ತು ಆ ವ್ಯಕ್ತಿಗೂ ನೌಕರನಿಗೂ ಇರುವ ಸಂಬಂಧವೇನು ಎಂಬ ಮಾಹಿತಿಯನ್ನೂ ದಾಖಲಿಸಬೇಕಾಗುತ್ತದೆ. ಅಂದರೆ, ಆಸ್ತಿ ನೇರವಾಗಿ ನೌಕರನ ಹೆಸರಿನಲ್ಲಿ ಇಲ್ಲ ಎಂಬ ಕಾರಣಕ್ಕೆ ಅದನ್ನು ಘೋಷಣೆಯಿಂದ ಹೊರಗಿಡಲು ಅವಕಾಶವಿರುವುದಿಲ್ಲ, ಇದು ಈ ಆದೇಶದ ಪ್ರಮುಖ ಅಂಶವಾಗಿದೆ ಎಂದು ಸರ್ಕಾರ ತಿಳಿಸಿದೆ.

Advertisement
Advertisement

ಈ ಆದೇಶದಲ್ಲಿ ನಿಗದಿತ ದಿನಾಂಕದೊಳಗೆ ಆಸ್ತಿ ವಿವರಗಳನ್ನು ಸಲ್ಲಿಸಿದ ನೌಕರರನ್ನಷ್ಟೇ ಬಡ್ತಿ ಪಟ್ಟಿಯಲ್ಲಿ ಸೇರಿಸಲು ಪರಿಗಣಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಸೂಚನೆಯನ್ನು ಪಾಲಿಸದಿದ್ದರೆ ಅದನ್ನು ಸರ್ಕಾರಿ ನೌಕರರ ನಡವಳಿಕೆ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಎಂದು ಜಾಲತಾಣ ಮೂಲಗಳು ವರದಿ ಮಾಡಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page