ಬೆಂಗಳೂರು : ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಭೇಟಿ ಮಾಡಲು ಆಗಮಿಸಿದ್ದು ಅವರಿಗೆ ಭಾರೀ ನಿರಾಸೆಯಾಗಿದೆ. ದರ್ಶನ್ ಅವರನ್ನು ಭೇಟಿ ಮಾಡಲು ನಿರಂತರವಾಗಿ 2 ಗಂಟೆಗಳ ಕಾಲ ಕಾದುನಿಂತರೂ ಸಾಧ್ಯವಾಗದೆ ನಟಿ ಬೇಸರದಿಂದಲೇ ವಾಪಸ್ ಹೋಗಿದ್ದಾರೆ.
ರಚಿತಾ ರಾಮ್ ಕಾರಾಗೃಹಕ್ಕೆ ದರ್ಶನ್ನನ್ನು ಭೇಟಿ ಮಾಡಲು ಬಂದಿದ್ದರು. ನಿಯಮಾವಳಿಗಳ ಪ್ರಕಾರ ದರ್ಶನ್ ಗಮನಕ್ಕೆ ನಟಿಯ ಭೇಟಿ ವಿಚಾರವನ್ನು ಜೈಲಧಿಕಾರಿಗಳು ತಂದರು. ಆದರೆ, ದರ್ಶನ್ ಅವರು ಹೊರಗಿನಿಂದ ಯಾರೇ ಬಂದರೂ ತಾನು ಭೇಟಿಯಾಗುವುದಿಲ್ಲ ಎಂದು ನಿರಾಕರಿಸಿದ್ದಾರೆ. ಹೀಗಾಗಿ ಎರಡು ಗಂಟೆಗಳ ಕಾಲ ಕಾದಿದ್ದ ರಚಿತಾ ರಾಮ್, ಭೇಟಿಗೆ ಅನುಮತಿ ಸಿಗದ ಕಾರಣ ಜೈಲಿನಿಂದ ಹಿಂತಿರುಗಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.













