ಕರ್ನಾಟಕ ಸರಕಾರ,ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ ತುಮಕೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ತಿಪಟೂರು ಆಶ್ರಯದಲ್ಲಿ ಸುಮತಿ ವಿದ್ಯಾಸಂಸ್ಥೆ ಸಹಕಾರದೊಂದಿಗೆ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಬೆಳಗಾವಿ ವಿರುದ್ಧ ರೋಚಕ ಪಂದ್ಯಾಟದಲ್ಲಿ 22/25 ಅಂಕಗಳ ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದು ಸತತ 4 ನೇ ಬಾರಿಗೆ 5 ವಿದ್ಯಾರ್ಥಿನಿಯರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜುಏನಾ ಡ್ಯಾಝಲ್ ಕುಟಿನ್ಹಾ, ಸನ್ನಿದಿ, ಹಾರ್ದಿಕಾ ಪಿ, ಧನ್ಯಶ್ರೀ, ಜೆನಿಟ ಸಿಂಧು ಪಸನ್ನ ವಿದ್ಯಾರ್ಥಿನಿಯರು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಅನಿತಾ ಟ್ರೆಸ್ಸಿ ಮಾರ್ಗದರ್ಶನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ತರಬೇತಿ ನೀಡಿದ್ದಾರೆ.












