ಹೊಸದಿಲ್ಲಿ: ಉದ್ಯಮಿ ಗೌತಮ್ ಅದಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಟಿಕ್ ಟಾಕ್ ಮಾತೃಸಂಸ್ಥೆ ಬ್ಯೆಟ್ ಡ್ಯಾನ್ಸ್ ಸಂಸ್ಥಾಪಕ ಝಾಂಗ್ ಯಿಮಿಂಗ್ ಹೊರಹೊಮ್ಮಿದ್ದಾರೆ.
ಎಐ ತಂತ್ರಜ್ಞಾನದ ಬೆಳವಣಿಗೆಯು ಹೊಸ ಸಂಪತ್ತು ಸೃಷ್ಟಿಗೆ ಕಾರಣವಾಗಿದ್ದು, ಝಾಂಗ್ ಯಿಮಿಂಗ್ ಈ ಸ್ಥಾನಕ್ಕೆ ಬರಲು ಪ್ರಮುಖ ಕಾರಣವಾಗಿದೆ. ಅವರ ಆಸ್ತಿ ಮೌಲ್ಯ 105 ಬಿಲಿಯಾನ್ (ಶತಕೋಟಿ) ಡಾಲರ್ ಗಿಂತಲೂ ಹೆಚ್ಚಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
43 ವರ್ಷದ ಝಾಂಗ್ ಅವರ ಸಂಪತ್ತು, 2019ರ ಮಾರ್ಚ್ ನಲ್ಲಿದ್ದ 13 ಬಿಲಿಯಾನ್ ಡಾಲರ್ ಗೆ ಹೋಲಿಸಿದರೆ ಎಂಟು ಪಟ್ಟು ಜಿಗಿತ ಕಂಡಿದೆ. ಬಿಲಿಯಾನೇರ್ಸ್ ಸೂಚ್ಯಂಕದಲ್ಲಿ ಇತ್ತೀಚಿನ ಶ್ರೇಯಾಂಕವು ಝಾಂಗ್ ಅವರನ್ನು ಅದಾನಿ ಅವರಿಗಿಂತ ಮುಂದಿಟ್ಟಿದೆ. ಜೂನ್ ನಲ್ಲಿ ಅದಾನಿ ಅವರ ಸಂಪತ್ತು 120 ಬಿಲಿಯಾನ್ ಡಾಲರ್‌ಗೆ ತಲುಪಿತ್ತಾದರೂ, ಎಂಎಸ್‌ಸಿಐ ಸೂಚ್ಯಂಕದಲ್ಲಿನ ನವೀಕರಣ ಹಾಗೂ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಬಾಂಡ್ ರಿಟಾರ್ನ್ಸ್ ಕುಸಿತದಿಂದ ಅವರ ಸಂಪತ್ತು ಇತ್ತೀಚಿನ ತಿಂಗಳುಗಳಲ್ಲಿ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ.













