ಸೆಪ್ಟೆಂಬರ್ 18 ರಂದು ನಡೆದ ಐತಿಹಾಸಿಕ ಕರಾವಳಿ ಕ್ಯಾಬಿನೆಟ್ನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದುತ್ವದ ಭದ್ರಕೋಟೆಯ ಮಠ-ಮಂದಿರ ಭರಪೂರ ಕೊಡುಗೆಗಳನ್ನು ಕೊಟ್ಟಿದೆ. ಒಡಿಯೂರು, ಮಾಣಿಲ ಮಠ, ಕೇಮಾರು ಮಠ ಸೇರಿದಂತೆ ಅನೇಕ ಮಠ ಮಂದಿರಗಳಿಗೆ ಸಾಕಷ್ಟು ಅನುದಾನಗಳನ್ನು ನೀಡಿದ ಸರ್ಕಾರ ವಜ್ರದೇಹಿ ಮಠವನ್ನು ಯಾಕೆ ಕೈ ಬಿಟ್ಟಿತು ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.
ಮಂಗಳೂರಿನ ಗುರುಪುರದಲ್ಲಿರುವ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಶ್ರೀಗಳು ಮಠವನ್ನು ಸ್ಥಾಪಿಸಿದ್ದು 1993ರಲ್ಲಿ. ತನ್ನದೇ ಮಠವಿದ್ದು ಅಲ್ಲಿ ಸಮಾಜಮುಖಿ ಕಾರ್ಯಗಳು ನಡೆಯುತ್ತಿದ್ದರೂ ಶ್ರೀಗಳು ಮಾತ್ರ ಜನಗಳಿಗೆ ಹೆಚ್ಚು ಪರಿಚಯವಾಗಿದ್ದು ಟೀಕೆಗಳಿಂದಲೇ. ಹಿಂದುತ್ವದ ಫೈರ್ಬ್ರ್ಯಾಂಡ್ ಎಂದೇ ಕರೆಸಿಕೊಳ್ಳುವ ರಾಜಶೇಖರಾನಂದ ಶ್ರೀಗಳು ಹಿಂದೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಜರಿದು ಸಾಕಷ್ಟು ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾದರು. ವಜ್ರದೇಹಿ ಶ್ರೀಗಳು ಮಠಾಧೀಶರುಗಳ ಮಧ್ಯೆ ಕಾಂಗ್ರೆಸ್ ಸರ್ಕಾರದ ಹೆಚ್ಚು ವಿರುದ್ಧ ಕಿಡಿಕಾರುತ್ತಾ ಬಂದಿರುವ ಸ್ವಾಮೀಜಿ ಎಂದೇ ಜನರು ಮಾತನಾಡುವಲ್ಲಿಯವರೆಗೆ ಇವರ ಟೀಕೆ ಮುಂದುವರೆದಿತ್ತು.
ಇನ್ನು ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನೆಮಾದ ಎರಡೂ ಭಾಗಗಳಿಗೂ ದೈವಾರಾಧನೆಯ ವಿಚಾರದಲ್ಲಿ ತುಳುನಾಡಿನಾದ್ಯಂತ ವಿರೋಧ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಪರ ಬ್ಯಾಟಿಂಗ್ ಮಾಡಿದ ಶ್ರೀಗಳು ಇಲ್ಲಿನ ಭಾಗದ ಜನರ ಕೋಪಕ್ಕೆ ಗುರಿಯಾಗಿದ್ದರು.
ಹಿಂದುತ್ವವೇ ನನ್ನ ಮೂಲ ಮಾನದಂಡ ಎನ್ನುತ್ತಾ ಕಾಂಗ್ರೆಸ್ ಸರ್ಕಾರವನ್ನು ವಿರೋಧ ಮಾಡಿದ ಮಠಾಧೀಶರಲ್ಲಿ ಮೂಂಚೂಣಿಯಲ್ಲಿರುವ ಇವರು ಮೂಲಗಳ ಪ್ರಕಾರ ಹಿಂದಿನ ಚುನಾವಣೆಯಲ್ಲಿ ರಾಜಶೇಖರಾನಂದ ಶ್ರೀಗಳು ಒಂದು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗದ ಕಾರಣಕ್ಕೆ ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಟೀಕೆಗಳ ಕಾರಣಕ್ಕಾಗಿಯೇ ಡಿ.ಕೆ.ಶಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೆಂಗಣ್ಣಿಗೆ ವಜ್ರದೇಹಿ ಮಠ ಗುರಿಯಾಗಿದೆ ಎನ್ನಲಾಗುತ್ತಿದೆ. ಜೊತೆಗೆ ಇದೇ ಕಾರಣಕ್ಕೆ ವಜ್ರದೇಹಿ ಮಠಕ್ಕೆ ಅನುದಾನ ನೀಡದೆ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬುದು ಇಲ್ಲಿನ ಭಕ್ತರ ಅಭಿಪ್ರಾಯವೂ ಆಗಿದೆ.
ಇನ್ನು ವಜ್ರದೇಹಿ ಮಠದ ಶ್ರೀಗಳು ಡಿ.ಕೆ.ಶಿ ಅವರನ್ನು ಭೇಟಿಯಾಗಿ ಮಠಕ್ಕೆ ಅನುದಾನ ನೀಡದ ಬಗ್ಗೆ ಚರ್ಚಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ದೊರೆತಿದೆ.












