ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾಗಿ ಮೋಹನ್‌ದಾಸ್‌ ಆಯ್ಕೆ! ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ!!

ಪುತ್ತೂರು : ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಇದರ ಪ್ರತಿಷ್ಠಿತ ಘಟಕ ಸಂಸ್ಥೆಗಳಲ್ಲಿ ಒಂದಾಗಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇದರ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಮಾರಂಭವು ಶಾಲಾ ಆಡಳಿತ ಮಂಡಳಿ ಕಚೇರಿಯಲ್ಲಿ ಇಂದು ದಿನಾಂಕ 02-11-2026ನೇ ಸೋಮವಾರ ಸಾಯಂಕಾಲ ಜರುಗಿತು. ಶಾಲಾ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಅಚ್ಯುತ ನಾಯಕ್ ಸಂಚಾಲಕರಾಗಿ ಮೋಹನದಾಸ್ ಬಲ್ಕಾಡಿ ಆಯ್ಕೆಯಾದರು.

Advertisement

ಇನ್ನು ಕನ್ನಡ ಮಾಧ್ಯಮದ ಅಧ್ಯಕ್ಷರಾಗಿ ಮುರಳೀಕೃಷ್ಣ ಹಂಸತಡ್ಕ ಆಯ್ಕೆಯಾಗಿದ್ದಾರೆ. ಸಂಚಾಲಕರಾಗಿ ಸಂಪತ್‌ ಕುಮಾರ್‌ ಅವರು ಆಯ್ಕೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Advertisement
Advertisement

ಮಾತೃ ಸಂಸ್ಥೆಯ ಕಾರ್ಯದರ್ಶಿಗಳಾದ ವಿಜಯನಾರಾಯಣ ಕೆ.ಎಂ ಅವರು ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಮಾರಂಭದಲ್ಲಿ ಆಡಳಿತ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷರಾದ ಡಾ. ಶಿವಪ್ರಕಾಶ್ ಎಂ ಮತ್ತು ಸಂಚಾಲಕರಾದ ರವಿ ನಾರಾಯಣ.ಎಂ ಹಾಗೂ ಸದಸ್ಯರುಗಳಾದ ಶ್ರೀ ಚಂದ್ರಶೇಖರ್ , ಡಾ.ಅಮೃತ ಪ್ರಸಾದ್, ಕೃಷ್ಣ ಮೋಹನ್ ಅವರುಗಳು ಉಪಸ್ಥಿತರಿದ್ದರು. ನೂತನ ಆಡಳಿತ ಮಂಡಳಿಯ ಸದಸ್ಯರುಗಳಾದ ಶ್ಯಾಮ ಶಾಂತಿಗೋಡು, ಶ್ರೀ ಶಿವರಾಮ.ಎಂ.ಎಸ್, ಶ್ರೀ ಹರೇಕೃಷ್ಣ, ಶ್ರೀ ನವೀನ್ ಪ್ರಸಾದ್ ಕೈಕಾರ, ಶ್ರೀ ವಿಜಯಾನಂದ ಉಪಸ್ಥಿತರಿದ್ದರು.

ನೂತನ ಆಡಳಿತ ಮಂಡಳಿಯ ಅಧ್ಯಕ್ಷರು ಸಂಚಾಲಕರು ಹಾಗೂ ಸದಸ್ಯರುಗಳಿಗೆ ಮಾತೃ ಸಂಸ್ಥೆಯ ಜೊತೆ ಕಾರ್ಯದರ್ಶಿ ಭರತ್ ಪೈ, ನಿರ್ದೇಶಕ ರಮೇಶ್ಚಂದ್ರ ಹಾಗೂ ನಿರ್ಗಮನ ಸಮಿತಿಯ ಪದಾಧಿಕಾರಿಗಳು ದೀಪಜ್ಯೋತಿಯನ್ನು ಹಸ್ತಾಂತರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತೃಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಲಕ್ಷ್ಮೀಪ್ರಸಾದ್ ಬೊಟ್ಯಾಡಿ, ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ ಮತ್ತು ಬೋದಕೇತರ ವೃಂದದವರು ಉಪಸ್ಥಿತರಿದ್ದು, ನೂತನ ಸಮಿತಿಗೆ ಶುಭ ಹಾರೈಸಿದರು.
ನಿರ್ಗಮನ ಸಮಿತಿಯ ಅಧ್ಯಕ್ಷರು ಮತ್ತು ಸಂಚಾಲಕರು ನೂತನ ಆಡಳಿತ ಮಂಡಳಿಗೆ ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ನೂತನ ಸಮಿತಿಯ ಅಧ್ಯಕ್ಷರು ಮತ್ತು ಸಂಚಾಲಕರು ಮುಂದಿನ ದಿನಗಳಲ್ಲಿ ಸಂಸ್ಥೆಯ ಅಭಿವೃದ್ಧಿಗೆ ಎಲ್ಲರೂ ಒಂದಾಗಿ ಒಟ್ಟಾಗಿ ಶ್ರಮಿಸುವ ಎಂದು ಎಲ್ಲರ ಸಹಕಾರವನ್ನು ಕೋರಿದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page