8ನೇ ವರ್ಷದ ಕಲ್ಲಡ್ಕದ ಪಿಲಿ! ಆಮಂತ್ರಣ ಪತ್ರ ಬಿಡುಗಡೆ!!

ಕಲ್ಲಡ್ಕ : ಹೋಟೆಲ್‌ ಲಕ್ಷ್ಮೀಗಣೇಶ್‌ ಅವರ ಸಹಕಾರದೊಂದಿಗೆ ನಾಗರಾಜ್‌ ಕಲ್ಲಡ್ಕ ನೇತೃತ್ವದಲ್ಲಿ ನಾಗಸುಜ್ಞಾನ ಫ್ರೆಂಡ್ಸ್‌ ಕಲ್ಲಡ್ಕ ಇದರ 8ನೇ ವರ್ಷದ ಕಲ್ಲಡ್ಕದ ಪಿಲಿಯ ಆಮಂತ್ರಣ ಪತ್ರಿಕೆ ಸೆ. 25ರಂದು ಬಿಡುಗಡೆಗೊಳಿಸಲಾಯಿತು.

Advertisement

ಕಳೆದ ಏಳು ವರ್ಷಗಳಿಂದ ನವರಾತ್ರಿಯ ಪುಣ್ಯ ಸಂದರ್ಭದಲ್ಲಿ ಸಾಂಪ್ರದಾಯಿಕ ದಸರಾ ಹುಲಿಗಳನ್ನು ಮಾಡುತ್ತಾ ಬಂದಿದ್ದು ಒಕ್ಟೋಬರ್‌ 18 ಆದಿತ್ಯವಾರದಂದು ನಡೆಯುವ ಎಂಟನೇ ವರ್ಷದ ಸಾಂಪ್ರದಾಯಿಕ ದಸರಾ ಹುಲಿಯ ಊದು ಪೂಜೆಯ ಆಮಂತ್ರಣ ಪತ್ರಿಕೆಯನ್ನು ಬಂಟ್ವಾಳದ ನಿತ್ಯಾನಂದ ನಗರ ಶ್ರೀ ಸದ್ಗುರು ನಿತ್ಯಾನಂದ ಗೋವಿಂದ ಸ್ವಾಮಿ ಮಂದಿರದಲ್ಲಿ ದಿನೇಶ್ ಭಂಡಾರಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ನಾಗಸುಜ್ಞಾನ ಇದರ ಪ್ರಮುಖರಾದ ಎನ್. ರಾಜೇಂದ್ರ ಹೊಳ್ಳ ಮತ್ತು ತಂಡದ ಸಂಸ್ಥಾಪಕ ನಾಗರಾಜ್ ಕಲ್ಲಡ್ಕ ಹಾಗೂ ತಂಡದ ಎಲ್ಲ ಪ್ರಮುಖರು ಭಾಗಿಯಾಗಿದ್ದರು.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page