ಪುತ್ತೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸಂತ ವಿಕ್ಟರನ ಬಾಲಕಿಯರ ಪ್ರೌಢಶಾಲೆ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಪುತ್ತೂರು ನಗರ ವಲಯ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು 17 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.ಜುಏನಾ ಡ್ಯಾಝಲ್ ಕುಟಿನ್ಹ , ಸನ್ನಿಧಿ, ಹಾರ್ದಿಕ ಪಿ, ಜೆನಿಟ ಸಿಂಧು ಪಸನ್ನ, ಧನ್ಯ ಶ್ರೀ, ಜನನಿ ಪಿ ಗೌಡ, ಆಯಿಷತ್ ಶಹೀಮ, ಫಾತಿಮತ್ ಅಫ್ರಾ, ಹೆಚ್ ನಮೃತಾ ಶೆಟ್ಟಿ, ಅಪೇಕ್ಷ ಮರಿನಾ ರಬೆಲ್ಲೋ, ಜಿಯಾ ಮತ್ತು ಚಂದನ ಭಾಗವಹಿಸಿದರು. ಹಾರ್ದಿಕ ಪಿ ಸವ್ಯಸಾಚಿ ಆಟಗಾರ್ತಿ ಹಾಗೂ ಜುಏನಾ ಡ್ಯಾಝಲ್ ಕುಟಿನ್ಹ ಉತ್ತಮ ದಾಳಿಗಾರ್ತಿ ಪ್ರಶಸ್ತಿ ಪಡೆದುಕೊಂಡರು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಅನಿತಾ ಟ್ರೆಸ್ಸಿ ಯವರ ಮಾರ್ಗದರ್ಶನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್ ತರಬೇತಿ ನೀಡಿದ್ದಾರೆ.
ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ :
ಇನ್ನು ಇಲ್ಲಿನ ವಿದ್ಯಾರ್ಥಿಗಳು 17 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜುಏನಾ ಡ್ಯಾಝಲ್ ಕುಟಿನ್ಹ ,ಸನ್ನಿಧಿ,ಹಾರ್ದಿಕ ಪಿ, ಜೆನಿಟ ಸಿಂಧು ಪಸನ್ನ, ಧನ್ಯ ಶ್ರೀ, ಜನನಿ ಪಿ ಗೌಡ, ಆಯಿಷತ್ ಶಹೀಮ, ಫಾತಿಮತ್ ಅಫ್ರಾ, ಹೆಚ್ ನಮೃತಾ ಶೆಟ್ಟಿ, ಉತ್ತಮ ಪ್ರದರ್ಶನ ನೀಡಿದರು. ಜುಏನಾ ಡ್ಯಾಝಲ್ ಕುಟಿನ್ಹಾ ಸವ್ಯಸಾಚಿ ಆಟಗಾರ್ತಿ ಹಾಗೂ ಸನ್ನಿಧಿ ಉತ್ತಮ ಹಿಡಿತಗಾರ್ತಿ ಪ್ರಶಸ್ತಿ ಪಡೆದುಕೊಂಡರು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಅನಿತಾ ಟ್ರೆಸ್ಸಿ ಯವರ ಮಾರ್ಗದರ್ಶನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್ ತರಬೇತಿ ನೀಡಿದ್ದಾರೆ.













