ಮೈಸೂರು ಕಂಬಳ ; ಸೆ.30 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಮೈಸೂರು: ಮೈಸೂರು ದಸರಾ 2026ರ ಅಂಗವಾಗಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಸರಾ ಕಂಬಳ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
ಸಾತಗಳ್ಳಿ ಹೊರವರ್ತುಲ ರಸ್ತೆಯಲ್ಲಿರುವ ವಿ.ಟಿ.ಯು. ಪ್ರಾದೇಶಿಕ ಕೇಂದ್ರದ ಹತ್ತಿರ ಕಂಬಳ ನಡೆಯಲಿದೆ. ಕಂಬಳದ ಕೋಣಗಳ ಮಾಲೀಕರು ಮತ್ತು ಕೋಣಗಳನ್ನು ಓಡಿಸುವವರು ವಿವಿಧ ಸ್ಪರ್ಧಾ ವಿಭಾಗಗಳ ಅಡಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

Advertisement


ಆಸಕ್ತರು ಸೆಪ್ಟೆಂಬರ್‌ 30ರೊಳಗಾಗಿ ಅರ್ಜಿ ಸಲ್ಲಿಬೇಕು. https://mysoredasara.gov.in ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಜಿಲ್ಲಾ ಪಂಚಾಯತ್‌ ಕಚೇರಿಯಿಂದ ಪ್ರಾಧಿಕಾರದ ಸಹಿ ಇರುವ ಭೌತಿಕ ಅರ್ಜಿ ಪಡೆದು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಕಂಬಳ ಉಪ ಸಮಿತಿಯ ಕಾರ್ಯಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page