ವಿಧಾನಪರಿಷತ್‌ ಚುನಾವಣೆಗೆ ಮುಹೂರ್ತ ಫಿಕ್ಸ್‌! ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಅ.23ಕ್ಕೆ ಮತದಾನ

ನವದೆಹಲಿ: ಕರ್ನಾಟಕ ಸೇರಿದಂತೆ ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ ರಾಜ್ಯಗಳ ಒಟ್ಟು 28 ವಿಧಾನ ಪರಿಷತ್ (MLC) ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಗಳ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗವು (ECI) ಮಂಗಳವಾರದಂದು (ಸೆ. 22) ಪ್ರಕಟಿಸಿದೆ.
ನಿವೃತ್ತಿಯಾಗಲಿರುವ ಸದಸ್ಯರಿಂದ ತೆರವಾಗಲಿರುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಈ ಸ್ಥಾನಗಳಿಗೆ ಅಕ್ಟೋಬರ್ 23 ರಂದು ಮತದಾನ ನಡೆಯಲಿದ್ದು , ಅಕ್ಟೋಬರ್ 27 ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯವಾರು ಸ್ಥಾನಗಳ ವಿವರ ಹೀಗಿದೆ :
ಉತ್ತರಪ್ರದೇಶ (11 ಸ್ಥಾನಗಳು): 5 ಪದವೀಧರ ಹಾಗೂ 6 ಶಿಕ್ಷಕರ ಕ್ಷೇತ್ರಗಳು.

Advertisement
  • ಬಿಹಾರ (8 ಸ್ಥಾನಗಳು): 4 ಪದವೀಧರ ಹಾಗೂ 4 ಶಿಕ್ಷಕರ ಕ್ಷೇತ್ರಗಳು (ಪಟ್ನಾ , ದರ್ಭಾಂಗ, ತಿರ್ಹುತ್, ಕೋಸಿ ಪದವೀಧರ ಕ್ಷೇತ್ರಗಳು ಹಾಗೂ ಪಟ್ನಾ , ದರ್ಭಾಂಗ, ತಿರ್ಹುತ್ ಮತ್ತು ಸಾರಣ್ ಶಿಕ್ಷಕರ ಕ್ಷೇತ್ರಗಳು).
  • ಮಹಾರಾಷ್ಟ್ರ (5 ಸ್ಥಾನಗಳು): 3 ಪದವೀಧರ (ಔರಂಗಾಬಾದ್, ಪುಣೆ, ನಾಗ್‌ಪುರ) ಹಾಗೂ 2 ಶಿಕ್ಷಕರ (ಅಮರಾವತಿ, ಪುಣೆ) ಕ್ಷೇತ್ರಗಳು.
  • ಕರ್ನಾಟಕ (4 ಸ್ಥಾನಗಳು): 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳು.

ಒಟ್ಟು 75 ಸದಸ್ಯ ಬಲ ಹೊಂದಿರುವ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ , ಪಶ್ಚಿಮ ಪದವೀಧರ ಕ್ಷೇತ್ರ , ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಚುನಾವಣಾ ವೇಳಾಪಟ್ಟಿ ಹೀಗಿದೆ
:

Advertisement
Advertisement
  • ಅಧಿಸೂಚನೆ ಹೊರಡಿಸುವ ದಿನಾಂಕ: ಸೆಪ್ಟೆಂಬರ್ 29, 2026
  • ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಅಕ್ಟೋಬರ್ 06, 2026
  • ನಾಮಪತ್ರ ಪರಿಶೀಲನೆ: ಅಕ್ಟೋಬರ್ 07, 2026
  • ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಅಕ್ಟೋಬರ್ 09, 2026
  • ಮತದಾನದ ದಿನಾಂಕ: ಅಕ್ಟೋಬರ್ 23, 2026 (ಶುಕ್ರವಾರ – ಬೆಳಗ್ಗೆ 8:00 ರಿಂದ ಸಂಜೆ 4:00 ರವರೆಗೆ)
  • ಮತ ಎಣಿಕೆ ಹಾಗೂ ಫಲಿತಾಂಶ: ಅಕ್ಟೋಬರ್ 27, 2026 (ಮಂಗಳವಾರ – ಸಂಜೆ 5:00 ರಿಂದ)
  • ಚುನಾವಣಾ ಪ್ರಕ್ರಿಯೆ ಮುಕ್ತಾಯ: ಅಕ್ಟೋಬರ್ 31, 2026

ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ, ಸಂಬಂಧಿಸಿದ ನಾಲ್ಕೂ ರಾಜ್ಯಗಳ ವ್ಯಾಪ್ತಿಗೆ ಒಳಪಡುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ಮಾದರಿ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page