ಭಾನುವಾರ ಬ್ಯಾಂಕ್‌ ಓಪನ್!!‌ ಸಾರ್ವಜನಿಕರ ಆತಂಕಕ್ಕೆ ಕೇಂದ್ರದ ಪರಿಹಾರ!!

ನವದೆಹಲಿ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆ.28ರಿಂದ 3 ದಿನ ಬ್ಯಾಂಕ್‌ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಕಾರಣ, ಶನಿವಾರ-ಭಾನುವಾರದ 2 ರಜಾ ದಿನ ಸೇರಿ ಬ್ಯಾಂಕ್‌ಗಳು 5 ದಿನ ಸ್ತಬ್ಧವಾಗುವ ಆತಂಕ ಈಗಾಗಲೇ ಸರ್ವಜನಿಕರಿಗೆ ಎದುರಾಗಿತ್ತು. ಇದಕ್ಕೆ ಆಸ್ಪದ ನೀಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌, ಸಾರ್ವಜನಿಕ ವಲಯದ ಬ್ಯಾಂಕ್‌ ಸೇರಿದಂತೆ ಎಲ್ಲಾ ಬ್ಯಾಂಕ್‌ಗಳು ಭಾನುವಾರ ಕಾರ್ಯನಿರ್ವಹಿಸಲಿವೆ ಎಂದು ಘೋಷಿಸಿದೆ.

Advertisement

ಗ್ರಾಹಕರ ಅನುಕೂಲಕ್ಕೆಂದು ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕೆ ಈಗಾಗಲೇ ಆರ್‌ಬಿಐ ಕೂಡ ಒಪ್ಪಿಗೆ ನೀಡಿದೆ ಎಂದು ವಿತ್ತ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಬ್ಯಾಂಕ್‌ಗಳು ಆರ್ಥಿಕ ವರ್ಷದ ಮಧ್ಯಂತರದಲ್ಲಿ ಹಣಕಾಸಿನ ಲೆಕ್ಕಪತ್ರಗಳನ್ನು ಮುಕ್ತಾಯಗೊಳಿಸುವ (ಸೆ.30) ಸಮಯದಲ್ಲೇ ಮುಷ್ಕರ ನಡೆಯಲಿರುವ ಕಾರಣ, ಆ ಪ್ರಕ್ರಿಯೆಗೆ ಅನಾನುಕೂಲ ಆಗದೇ ಇರಲಿ ಎಂಬ ಉದ್ದೇಶವೂ ಇದೆ. ಈ ರೀತಿ ಭಾನುವಾರ ಬ್ಯಾಂಕ್‌ ತೆರೆಯುವುದು ಅಪರೂಪದಲ್ಲೇ ಅಪರೂಪವಾಗಿದೆ.

Advertisement
Advertisement

ವಾರದಲ್ಲಿ 5 ದಿನ ಮಾತ್ರ ಕೆಲಸ, ಪಿಂಚಣಿಯ ಪರಿಷ್ಕರಣೆ ಮತ್ತು ಸುಧಾರಣೆ, ಎಲ್ಲಾ ಪಿಂಚಣಿದಾರರಿಗೆ ಏಕರೂಪದ ತುಟ್ಟಿಭತ್ಯೆ ಸೂತ್ರ ಹಾಗೂ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ (ಎನ್‌ಪಿಎಸ್‌) ವ್ಯಾಪ್ತಿಗೆ ಒಳಪಡುವ ನೌಕರರಿಗೆ ಹಳೆಯ ಪಿಂಚಣಿ ಯೋಜನೆಗೆ (ಒಪಿಎಸ್‌) ಬದಲಾಯಿಸಿಕೊಳ್ಳುವ ಆಯ್ಕೆಯನ್ನು ಒದಗಿಸುವುದು ಸೇರಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆ ಯುಎಫ್‌ಬಿಯು ಮುಷ್ಕರ ನಡೆಸಲಿದೆ ಎಂದು ತಿಳಿದು ಬಂದಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page