ಸೌಜನ್ಯ ಪ್ರಕರಣದ ಅಧಿಕಾರಿಗಳ ಕುರಿತು ಸಣ್ಣ ಸಂಶಯವಿದೆ : ಡಾ. ಕಲ್ಲಡ್ಕ ಪ್ರಭಾಕರ್‌ ಭಟ್‌ || ಮಾಧ್ಯಮ ಹೇಳಿಕೆ ನೀಡಿದ ಆರ್‌ಎಸ್‌ಎಸ್‌ ಹಿರಿಯ ಮುಖಂಡ!!

ಬಂಟ್ವಾಳ : ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಕೆಲವು ದಿನಗಳ ಹಿಂದೆ ವಿಶೇಷ ತನಿಖಾ ತಂಡವನ್ನು ಸರ್ಕಾರ ರಚಿಸಿರುವುದನ್ನು ಸ್ವಾಗತಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ತನಿಖಾ ತಂಡದ ಕೆಲವು ಅಧಿಕಾರಿಗಳ ಕುರಿತು ಜನರಲ್ಲಿ ಸಣ್ಣ ಸಂಶಯವಿದೆ ಎಂದು ಹೇಳಿದ್ದಾರೆ.

Advertisement

ಬಂಟ್ವಾಳದಲ್ಲಿ ಬಜರಂಗದಳ ಹಾಗೂ ವಿಎಚ್‌ಪಿ ಹಮ್ಮಿಕೊಂಡಿದ್ದ ಬಿಸಿರೋಡ್ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, ಎಸ್‌ಐಟಿ ರಚನೆಯಾಗಿರುವುದು ಸ್ವಾಗತಾರ್ಹ. ಆದರೆ ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳ ಬಗ್ಗೆ ಪರಿಪೂರ್ಣ ವಿಶ್ವಾಸ ಮೂಡಿಲ್ಲ. ಸಣ್ಣ ಸಂಶಯ ಇದೆ. ಇದರಲ್ಲಿ ಇರುವ ಎಲ್ಲಾ ವ್ಯಕ್ತಿಗಳು ಸರಿಯಾಗಿದ್ದಾರೆಯೇ ಎಂಬ ಸಂಶಯವಿದೆ.

Advertisement
Advertisement

ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಒಳ್ಳೆಯ ಕಮಿಷನ‌ರ್. ಅವರು ದಿಕ್ಕು ತಪ್ಪುವುದಿಲ್ಲ ಎಂಬ ವಿಶ್ವಾಸವಿದೆ. ಆದರೆ ಉಳಿದ ಅಧಿಕಾರಿಗಳ ಬಗ್ಗೆ ನಮಗೆ ಸಂಶಯವಿದೆ. ಅಧಿಕಾರಿಗಳು ಯಾವುದೇ ಒತ್ತಡ, ಪ್ರಭಾವಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು. ಸರಿಯಾಗಿ ತನಿಖೆ ಮಾಡಿದರೆ ನೂರಕ್ಕೆ ನೂರು ಸತ್ಯ ಸಿಗುತ್ತದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page