ಮೈಸೂರು: ಧರ್ಮನ್ ಸಿನಿಮಾದ ಚಿತ್ರೀಕರಣಕ್ಕಾಗಿ ಮೈಸೂರಿಗೆ ನಟ ರಜನಿಕಾಂತ್ ಆಗಮಿಸಿದ್ದು, ಬುಧವಾರದಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ಮಾಡಿ ದೇವರ ದರ್ಶನ ಪಡೆದರು. ರಜನಿಕಾಂತ್ ಅವರು ಚಾಮುಂಡಿ ಬೆಟ್ಟದಲ್ಲಿ ಸೇರಿದ್ದ ಅಭಿಮಾನಿಗಳ ಕಡೆ ಕೈ ಬೀಸಿದ ನಂತರ ಮತ್ತೆ ಚಿತ್ರೀಕರಣ ನಡೆಯುವ ಸ್ಥಳಕ್ಕೆ ತೆರಳಿದರು.
ಮಂಗಳವಾರದಿಂದ ಸಿನೆಮಾದ ಚಿತ್ರೀಕರಣವು ಸೋಮನಾಥಪುರಂ ನಲ್ಲಿ ನಡೆಯುತ್ತಿದ್ದು, ಅಭಿಮಾನಿಗಳು ರಜನಿಕಾಂತ್ ಅವರನ್ನು ನೋಡಲು ಆಗಮಿಸುತ್ತಿದ್ದಾರೆ.













