MRPL ದುರಂತದ ವಿರುದ್ಧ ಸುರತ್ಕಲ್‌ ಠಾಣೆಯಲ್ಲಿ ಎಫ್‌ಐಆರ್‌!

ಮಂಗಳೂರು: MRPL ತೈಲ ಸ್ಥಾವರ ಘಟಕದಲ್ಲಿ ನಡೆದ ದುರಂತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಸುರತ್ಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಘಟನೆಯಲ್ಲಿ ಒಟ್ಟು 13 ಮಂದಿ ಗಾಯಗೊಂಡಿದ್ದು, ಈ ಪೈಕಿ ಮುಲ್ಕಿ ಹಳೆಯಂಗಡಿ ನಿವಾಸಿ ಮನೀಶ್ ಕರ್ಕಡ(23) ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.ಕಾರ್ಕಳ ಹಿರ್ಗಾನ ನಿವಾಸಿ ರವಿ ಪೂಜಾರಿ ಎಂಬವರು ಎಂಆರ್ ಪಿಎಲ್ 3ನೇ ಫೇಸ್ ನಲ್ಲಿರುವ ಘಟಕದ ನೌಕರರಿಗೆ ಊಟ, ಉಪಹಾರ ಪೂರೈಸುವ ಕೆ-ಸ್ಟಾ‌ರ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಮಧ್ಯಾಹ್ನ 12.15ರ ವೇಳೆಗೆ ಊಟ ವಿತರಣೆಗೆ ಬಂದಿದ್ದಾಗ ಕೋಕರ್ ಹೈಡೋ ಟ್ರೇಯರ್ ಯೂನಿಟ್ ನಲ್ಲಿ ಒಮ್ಮಿಂದೊಮ್ಮೆಲೇ ಸ್ಫೋಟ ಸಂಭವಿಸಿದೆ.

Advertisement

ಇದರಿಂದಾಗಿ ರವಿ ಪೂಜಾರಿ ಸೇರಿದಂತೆ ಸ್ಥಳದಲ್ಲಿದ್ದ ಘಟಕದ ನೌಕರರಾದ ರಾಜೇಶ್ ಪ್ರಸಾದ್, ಇಂದ್ರಜಿತ್, ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್, ಅವಿನಾಶ್, ಅಕ್ಷಯ್, ಜಗಜೀವನ್ ಸಿಂಗ್, ಶರತ್ ಶೆಟ್ಟಿ ಗಾಯಗೊಂಡಿದ್ದಾರೆ. ರಾಜೇಶ್ ಪೂಜಾರಿ ಮತ್ತು ಮನೀಶ್ ಕರ್ಕಡ ಎಂಬವರಿಗೆ ಗಂಭೀರ ಗಾಯವಾಗಿದ್ದು, ಮನೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement
Advertisement

ಎಂಆರ್ ಪಿಎಲ್ ಫೇಸ್ 3ರಲ್ಲಿ ಕೋಕರ್ ಹೈಡೋ ಟೀಯರ್ ಯೂನಿಟ್ ನಲ್ಲಿ ಯಂತ್ರೋಪಕರಣಗಳನ್ನು ಯುನಿಟ್ ಮುಖ್ಯಸ್ಥರು ಮತ್ತು ಎಂಆರ್ ‌ಪಿಎಲ್ ಸಂಸ್ಥೆಯವರು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ಘಟನೆ ನಡೆದಿದೆ ಎಂದು ರವಿ ಪೂಜಾರಿಯವರ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಬಿಎನ್‌ಎಸ್ 287, 125 ಬಿ, 106 ಅಡಿ ಪ್ರಕರಣ ದಾಖಲಾಗಿದೆ.

ಘಟನೆಯಲ್ಲಿ ಮೃತಪಟ್ಟ ಮನೀಶ್ ಕರ್ಕಡ (23) ಮುಲ್ಕಿ ಹಳೆಯಂಗಡಿ ನಿವಾಸಿಯಾಗಿದ್ದು, ಒಂದೂವರೆ ವರ್ಷದ ಹಿಂದಷ್ಟೇ ಮನೀಶ್ ಗುತ್ತಿಗೆ ನೌಕರನಾಗಿ ಎಂಆರ್. ಪಿಎಲ್ ಸೇರಿದ್ದರು. ಈತನ ಅಕಾಲಿಕ ಸಾವಿಗೆ ಸ್ಥಳೀಯರು ಮಮ್ಮಲ ಮರುಗಿದ್ದಾರೆ. ಹಳೆಯಂಗಡಿಯ ಆಲ್ಬರ್ಟ್ ಕರ್ಕಡ ಮತ್ತು ಸುನಿತಾ ಕರ್ಕಡ ದಂಪತಿಯ (ಮನೀಶ್- ಅನೀಶ್) ಇಬ್ಬರು ಅವಳಿ ಮಕ್ಕಳಲ್ಲಿ ಕಿರಿಯವನಾಗಿದ್ದು, ಉತ್ತಮ ಕಬಡ್ಡಿ ಆಟಗಾರನೂ ಆಗಿದ್ದ. ಇದಲ್ಲದೆ, ಹಳೆಯಂಗಡಿ ಸಿಎಸ್‌ಐ ಅಮ್ಮಾನ್ ಮೆಮೋರಿಯಲ್ ಚರ್ಚ್ ಸದಸ್ಯರಾಗಿದ್ದು, ದುರಂತ ಸಾವಿಗೀಡಾದ ಹಿನ್ನೆಲೆಯಲ್ಲಿ ಸ್ನೇಹಿತರು ಮತ್ತು ಚರ್ಚ್ ಸಮುದಾಯ ಕಂಬನಿ ಮಿಡಿದಿದೆ ಎಂದು ಮೂಲಗಳು ತಿಳಿಸಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page