ದೇವೆರ್ಲಾ ಎಂಕುಲೆ ದೈವಲಾ ಎಂಕುಲೆ!! ಎಕ್ಕಾರಿನ ತಿರುಪತಿ ದೇವಸ್ಥಾನದ ಕಟ್ಟುಕಟ್ಟಳೆಗೆ ತೀವ್ರ ವಿರೋಧ! ಈ ಗ್ರಾಮಕ್ಕೆ ನಾವೇ ದೇವರು ನಾವೇ ದೈವಗಳು!! ಇದು ಕೊಡಮಣಿತ್ತಾಯನ ನುಡಿ!!!

ಎಕ್ಕಾರಿನಲ್ಲಿ ನಿರ್ಮಾಣವಾಗಲಿರುವ ತಿರುಪತಿ ದೇವಸ್ಥಾನದ ಬಗ್ಗೆ ಇಲ್ಲಿನ ಕಟ್ಟುಕಟ್ಟಳೆಗೆ ವಿರೋಧವಾಗಿದೆ, ಈ ಬಗ್ಗೆ ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಪ್ರಮುಖರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ. ಕರ್ನಾಟಕ ಸರಕಾರ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಗೆ 10 ಎಕರೆ ಭೂಮಿಯನ್ನು ಎಕ್ಕಾರು ಗ್ರಾಮದಲ್ಲಿ ಮಂಜೂರುಮಾಡಿದ್ದು, ಇಲ್ಲಿ ದೇವಸ್ಥಾನ ನಿರ್ಮಾಣವಾಗುವುದು ಬಹುತೇಕ ಖಚಿತವಾಗಿದೆ, ಆದರೆ ಇದು ಎಕ್ಕಾರು ಗ್ರಾಮದ ಕಟ್ಟುಕಟ್ಟಳೆಗೆ ವಿರೋಧವಾಗಿದೆ ಎಂದು ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಸಂಬಂಧಪಟ್ಟ ಮನೆತನದವರು ತಿಳಿಸಿದ್ದಾರೆ.

Advertisement

ಕಟೀಲು ಸಮೀಪದಲ್ಲಿನ ಎಕ್ಕಾರು ಗ್ರಾಮ ಮಂಗಳೂರು ತಾಲೂಕಿನ ಮೂರ್ನಾಡು ಮಾಗಣಗೆ ಒಳಪಟ್ಟಿದ್ದು, ಎಕ್ಕಾರು ಗ್ರಾಮ ತನ್ನದೇ ಆದ ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಹಿನ್ನಲೆ ಹೊಂದಿದೆ, ಸುಮಾರು 800 ವರ್ಷದ ಹಿಂದೆ ಸ್ಥಾಪನೆಗೊಂಡ ಎಕ್ಕಾರು ಕೊಡಿಮಣಿತ್ತಾಯ ದೈವಸ್ಥಾನ ಬಹಳಷ್ಟು ಇತಿಹಾಸ ಹೊಂದಿದ್ದು, ಎಕ್ಕಾರು ಮಾಗಣೆಯಲ್ಲಿ ಮುಗುಳಿ ಮತ್ತು ಧ್ವಜಸ್ತಂಭ ಹೊಂದಿದ ದೇವಸ್ಥಾನ ಕಾಣ ಸಿಗುವುದಿಲ್ಲ. ಕಟ್ಟಿ ದೇವಸ್ಥಾನ ಇಜ್ಜಿ ದೀಪಾಯಿ ಮುಗುಳಿ ಇಜ್ಜಿ, ದೇವೆರ್ಲಾ ಎಂಕುಲೆ ದೈವಲಾ ಎಂಕುಲೆ ಅಂದರೆ ಸ್ಥಾಪಿಸಿದ ಬೇರೆ ದೇವಸ್ಥಾನವಿಲ್ಲ, ಇಟ್ಟ ಕಲಶವಿಲ್ಲ, ಈ ಗ್ರಾಮಕ್ಕೆ ನಾವೇ ದೇವರು ನಾವೇ ದೈವಗಳು ಎಂಬುದಾಗಿ ಇಲ್ಲಿನ ದೈವದ ನುಡಿಯಾಗಿದ್ದು ಅಂದಿನಿಂದ ಇಂದಿನವರೆಗೂ ಈ ಮಾಗಣೆಯಲ್ಲಿ ದ್ವಜಸ್ಥಂಭ ಹಾಗೂ ಕಲಶ ಇರುವ ದೇವಸ್ಥಾನ ಅಥವಾ ದೈವಸ್ಥಾನ ನಿರ್ಮಾಣವಾಗಿಲ್ಲ.

Advertisement
Advertisement

ಸುರತ್ಕಲ್‌ ಮುಕ್ಕ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ದೊರೆತ ತಾಮ್ರ ಶಾಸನದಲ್ಲೂ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ಇತಿಹಾಸವಿದೆ. 1874 ಎ.ಸಿ ಬರ್ನೆಲ್‌ ಹಾಗೂ 1923 ರಲ್ಲಿ ಗಣಪತಿ ರಾವ್‌ ಐಗಲ್‌ ತಮ್ಮ ಸಂಶೋಧನಾ ಕೃತಿಯಲ್ಲಿ ಇಲ್ಲಿನ ಬಗ್ಗೆ ಉಲ್ಲೇಖಿಸಿದ್ದು, ಈ ಗ್ರಾಮದಲ್ಲಿ ವಿಜಯನಗರ, ಬಂಗ, ಅಜಿಲ, ಪೈವ ಹೆಗ್ಗಡೆ ಮುಂತಾದ ರಾಜಾಶ್ರಯ ಇದ್ದ ಕಾಲದಲ್ಲಿಯೂ ಇಲ್ಲಿನ ಕಟ್ಟು ಕಟ್ಟಳೆಯನ್ನು ಗೌರವಿಸಿ ಬೇರೆ ದೇವಸ್ಥಾನ ನಿರ್ಮಾಣ ಮಾಡಿಲ್ಲ. ಇಲ್ಲಿ ಎಕ್ಕಾರು ಕೊಡಿಮಣಿತ್ತಾಯ ದೈವಸ್ಥಾನವೇ ಇಲ್ಲಿನ ಪ್ರಧಾನ ದೇವಸ್ಥಾನ ಹಾಗೂ ದೈವಸ್ಥಾನವಾಗಿದೆ. ಮತ್ತೋಂದು ದೇವಸ್ಥಾನ ನಿರ್ಮಾಣವಾದರೆ ಧಾರ್ಮಿಕ ನಂಬಿಕೆಯ ಪ್ರಕಾರ ಇಲ್ಲಿನ ಕಟ್ಟುಕಟ್ಟಳೆಯನ್ನು ಉಲ್ಲಂಘಿಸಿದಂತಾಗುತ್ತದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page