ಪುತ್ತೂರು: ಕೆದಿಲ ಪಾಟ್ರಕೋಡಿ, ಮಿತ್ತೂರು ಗಡಿಯಾರ, ಲೈನ್ಮ್ಯಾನ್ ಕೆಮ್ಮಾಯಿ ನಿವಾಸಿ ರವಿ ಗೌಡ ಅವರು ಕೆದಿಲ ಶಾಲೆಯ ಬಳಿ ಸುಮಾರು 3.30 ಗಂಟೆಗೆ ಕರ್ತವ್ಯ ನಿರ್ವಹಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ (ಕರೆಂಟ್ ಶಾಕ್ ಹೊಡೆದು) ನಿಧನ ಹೊಂದಿದ್ದಾರೆ.
ಕರೆ ಬಂದ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿ ಕೆಲಸ ಮಾಡಿಕೊಡುತ್ತಿದ್ದ ಅವರು, ಗ್ರಾಮಸ್ಥರಿಗೆ ಪ್ರೀತಿಪಾತ್ರರಾಗಿದ್ದರು. ಅವರ ಅಕಾಲಿಕ ನಿಧನಕ್ಕೆ ಗ್ರಾಮವೇ ಕಂಬನಿ ಮಿಡಿದಿದೆ.













