ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ! ಇದು ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಜನ್ಮ ದಿನದ ವಿಶೇಷ!!

ಪಾಂಡವಪುರ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಜನ್ಮದಿನದ ಪ್ರಯುಕ್ತ ಕ್ಯಾತನಹಳ್ಳಿ ಗ್ರಾಮದಲ್ಲಿ ಗುರುವಾರ ಮತ್ತು ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬಿಡದಿಯ ಅಶ್ವಿನಿ ಅಂಬರೀಶ್ ಅವರು ಹಸುವಿನಿಂದ 45 ಲೀಟರ್ 300ಗ್ರಾಂ ಹಾಲು ಕರೆದು ಪ್ರಥಮ ಸ್ಥಾನ ₹75,549 ನಗದು, ಟ್ರೋಫಿ ಹಾಗೂ ಪಶು ಆಹಾರ ಬಹುಮಾನ ಪಡೆದರು.
ಉಳಿದಂತೆ ಶ್ರೀ ರಂಗಪಟ್ಟಣ ತಾಲ್ಲೂಕು ಚಿನ್ನೇನಹಳ್ಳಿ ಗ್ರಾಮದ ಕಿರಣ್ ಗೂಳಿ, ತಮ್ಮ ಹಸುವಿನಲ್ಲಿ 41ಲೀ. 970ಗ್ರಾಂ ಹಾಲು ಕರೆದು ದ್ವೀತಿಯ ಸ್ಥಾನ ₹55,549, ನಗದು, ಟ್ರೋಪಿ ಹಾಗೂ ಪಶು ಆಹಾರ ಪಡೆದರು. ಚನ್ನಪಟ್ಟಣದ ಅಭಿಷೇಕ್ ತಮ್ಮ ಹಸುವಿನಲ್ಲಿ 36ಲೀ. 750 ಗ್ರಾಂ ಹಾಲು ಕರೆದು ತೃತೀಯ ಬಹುಮಾನ ₹ 25,549 ನಗದು, ಟ್ರೋಪಿ ಮತ್ತು ಪಶು ಆಹಾರ ಪಡೆದರು.

Advertisement

ಮೈಸೂರಿನ ಗಣೇಶ್ ಎಜಿಎಂ ಅವರು ತಮ್ಮ ಹಸುವಿನಲ್ಲಿ 35ಲೀ .990 ಗ್ರಾಂ ಹಾಲು ಕರೆದು ನಾಲ್ಕನೇ ಬಹುಮಾನ ₹15,549, ನಗದು, ಟ್ರೋಪಿ ಮತ್ತು ಪಶು ಆಹಾರ ಬಹುಮಾನ ಪಡೆದರು. 13 ಮಂದಿ ಹಸುಗಳ ಮಾಲೀಕರಿಗೆ ಪಶು ಆಹಾರ ಮತ್ತು ಸಮಾದಾನಕರ ಬಹುಮಾನ ನೀಡಲಾಯಿತು.
ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವೆ ಇಲಾಖೆ, ಕ್ಯಾತನಹಳ್ಳಿ ಗ್ರಾಮಸ್ಥರು, ಮಂಡ್ಯ, ಪುಟ್ಟಣ್ಣಯ್ಯ ಫೌಂಡೇಶನ್ ಮತ್ತು ಕ್ಯಾತನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಇವರ ಆಶ್ರಯದಲ್ಲಿ ‘ಕಾಮಧೇನು ಕ್ಷೀರ ವೈಭವ–ಆಧುನಿಕ ಹೈನುಗಾರಿಕೆ ನಮ್ಮ ಹೆಮ್ಮೆ, ಗೋ ರಕ್ಷಣೆ ನಮ್ಮ ಹೊಣೆ’ ಎಂಬ ಆಶ್ರಯದೊಂದಿಗೆ ಕೆ.ಎಸ್.ಪುಟ್ಟಣ್ಣಯ್ಯ ಕ್ಷೀರಾಧಾರ ಪ್ರಥಮ ವರ್ಷದ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು.

Advertisement
Advertisement

ಹಾಲು ಕರೆಯುವ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ರೈತರಾದ ಪಾಂಡವಪುರ ಕಟ್ಟೇರಿ ಶರತ್ ಜವರೇ ಗೌಡ, ಮೈಸೂರಿನ ಮೇಟಗಳ್ಳಿಯ ಭೈರವೇಶ್ವರ ಡೇರಿ, ಗಂಜಾಂನ ನಿಶಾಂತ್ ಶಿವರಾಮು, ಅಜೇಯ್ ವೆಟ್ ಫಾರಂ, ಬೆಂಗಳೂರಿನ ಕನಕನ ಪಾಳ್ಯದ ಪಟಾಲಮ್ಮ ಪಶುಪಾಲನೆ, ಮಂಡ್ಯ ಕಾಲಭೈರವೇಶ್ವರ, ಬಿಡದಿಯ ಅಶ್ವಿ ಚನ್ನಪಟ್ಟಣದ ಅಭಿಷೇಕ್, ಪಾಂಡವಪುರ ಎಲೆಕೆರೆಯ ರವಿ ಚಂದ್ರಶೇಖರ್, ಗುಳುವಿನ ಅತ್ತಗುಪ್ಪೆ ನಟರಾಜು, ಗುಂಜೂರಿನ ಚೇತನ್, ಶ್ರೀ ರಂಗಪಟ್ಟಣದ ಗಂಜಾಂನ ಪ್ರಕಾಶ್ ಗೌತಮ್, ಮೈಸೂರಿನ ಗಣೇಶ್ ಎಜಿಎಂ, ಕೆ.ಆರ್.ನಗರ ಸಾಲಿಗ್ರಾಮದ ಲಕ್ಷ್ಮಿಪುರ ಮಂಜುನಾಥ್, ಪಾಂಡವಪುರ ಬನ್ನಂಗಾಡಿಯ ಅವಿನಾಶ್, ಶ್ರೀ ರಂಗಪಟ್ಟಣ ಚಿನ್ನೇನಹಳ್ಳಿಯ ಕಿರಣ್ ಗೂಳಿ, ಶ್ರೀ ರಂಗಪಟ್ಟಣ ಟಿ.ಎಂ. ಹೊಸೂರಿನ ಚೇತನ ದರ್ಶನ್ ಪುಟ್ಟಣ್ಣಯ್ಯ ಬಳಗದವರು ಭಾಗವಹಿಸಿದ್ದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲ್ಲೂಕು ಅಧ್ಯಕ್ಷ ವೈ.ಪಿ.ಮಂಜುನಾಥ್, ಹಿರಿಯ ರೈತ ಹೋರಾಟಗಾರ ಕೆ.ಟಿ.ಗೋವಿಂದೇ ಗೌಡ, ಮುಖಂಡರಾದ ಕೆ.ಕೆ.ಗೌಡೇ ಗೌಡ, ಕೇ ಶವಸ್ವಾಮಿ, ಚಿಕ್ಕಾಡೆ ಹರೀಶ್, ಕೆ.ಎನ್.ವಿಜಯಕುಮಾರ್, ಎಸ್.ದಯಾನಂದ್, ಕ್ಯಾತನಹಳ್ಳಿ ರಾಘವ ಪ್ರಕಾಶ್, ಅರಳಕುಪ್ಪೆ ರೂಪ, ಬೀರಶೆಟ್ಟಹಳ್ಳಿ ಗಿರೀಶ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವಯ್ಯ, ಪಶು ವೈದ್ಯ ಡಾ.ಹಿಮಾಚಲ್, ಡಾ.ಪ್ರವೀಣ್ ಕುಮಾರ್, ಡಾ. ಸಿ.ಎಂ.ಪ್ರಕಾಶ್‌, ಡಾ. ರವಿನಾಯಕ್‌, ಡಾ. ಎಸ್‌.ಕೆ. ಪ್ರಭುಸ್ವಾಮಿ, ಸಿಬ್ಬಂದಿಗಳಾದ ಶ್ರೀನಿವಾಸ್‌, ಶಿವಲಿಂಗೇ ಗೌಡ, ಲೋಕೇಶ್‌, ಸಚ್ಚಿನ್‌, ಕದರೇಶ್‌ ಉಪಸ್ಥಿತರಿದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page