ಮೈಸೂರು ದಸರಾದಲ್ಲಿ ಧನಂಜಯನಿಗೆ ಸಿಗಲಿದೆಯೇ ಅಂಬಾರಿ ಹೊರುವ ಭಾಗ್ಯ?? ಇಲ್ಲಿದೆ ನೋಡಿ ಎಕ್ಸ್‌ಕ್ಲೂಸಿವ್‌ ಮಾಹಿತಿ!!

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಜವಾಬ್ದಾರಿ ಈ ಬಾರಿ ಯಾವ ಆನೆಗೆ ಸಿಗಲಿದೆ ಎಂಬ ಚರ್ಚೆ ಜೋರಾಗಿದ್ದು, ಅರಣ್ಯ ಇಲಾಖೆಯ ಪರಿಶೀಲನೆಯಲ್ಲಿ ಧನಂಜಯ ಆನೆಯ ಹೆಸರು ಮುಂಚೂಣಿಗೆ ಬಂದಿದೆ.
ಅಂಬಾರಿ ಹೊತ್ತು ಸಾಗುತ್ತಿದ್ದ ಗಜಪಡೆಯ ಹಿರಿಯ ಆನೆ ಅಭಿಮನ್ಯು ನಿವೃತ್ತಿಯಾಗಿರುವ ಹಿನ್ನೆಲೆಯಲ್ಲಿ ಹೊಸ ಅಂಬಾರಿ ಆನೆಯ ಆಯ್ಕೆ ಅನಿವಾರ್ಯವಾಗಿದೆ.

Advertisement

ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಅಂಬಾರಿ ಆನೆ ಆಯ್ಕೆ ಕುರಿತು ಸುಳಿವು ನೀಡಿದ್ದು, ಸದ್ಯದ ಸ್ಪರ್ಧೆಯಲ್ಲಿ ಧನಂಜಯ ಮುಂಚೂಣಿಯಲ್ಲಿದ್ದಾನೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋಸ್ಟ್ ಲೈಕ್ಲಿ ಧನಂಜಯ’ ಎಂದು ಹೇಳುವ ಮೂಲಕ ಈ ಬಾರಿ ಚಿನ್ನದ ಅಂಬಾರಿ ಧನಂಜಯನ ಪಾಲಾಗುವ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ. ಆದರೆ ಅಂತಿಮ ನಿರ್ಧಾರವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಬೇಕಿದೆ.
ಧನಂಜಯ ಈಗಾಗಲೇ ವಿವಿಧ ತಾಲೀಮು ಹಂತಗಳಲ್ಲಿ ಗಮನ ಸೆಳೆದಿದ್ದು, ಆತನ ಸಾಮರ್ಥ್ಯ ಮತ್ತು ಗಾಂಭೀರ್ಯ ಅಂಬಾರಿ ಹೊರುವ ಅವಕಾಶಕ್ಕೆ ಪೂರಕವಾಗಿವೆ ಎನ್ನಲಾಗುತ್ತಿದೆ. ಇದೇ ವೇಳೆ ಮಹೇಂದ್ರ, ಪ್ರಶಾಂತ ಹಾಗೂ ಏಕಲವ್ಯ ಕೂಡ ಸ್ಪರ್ಧೆಯಲ್ಲಿರುವುದರಿಂದ ಅಂತಿಮ ಕ್ಷಣದಲ್ಲಿ ಆಯ್ಕೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಸುದ್ದಿ ಮೂಲಗಳು ವರದಿಯಲ್ಲಿ ಹೇಳಿವೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page