ನವದೆಹಲಿ: ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಯೋಜನೆಯಡಿ ನೀಡಲಾಗುತ್ತಿರುವ ₹300 ಗ್ಯಾಸ್ ಸಿಲಿಂಡರ್ ಸಬ್ಸಿಡಿಯನ್ನು 2026-27ನೇ ಆರ್ಥಿಕ ವರ್ಷದಲ್ಲೂ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಮೊತ್ತವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ನೇರ ನಗದು ವರ್ಗಾವಣೆ ಮೂಲಕ ಜಮೆಯಾಗಲಿದೆ ಎಂದು ತಿಳಿದು ಬಂದಿದೆ.
ಇನ್ನು 14.2 ಕೆಜಿ ಸಿಲಿಂಡರ್ ಜತೆಗೆ 5 ಕೆಜಿಯ ಸಣ್ಣ ಸಿಲಿಂಡರ್‌ಗಳಿಗೂ ಅನುಪಾತದ ಆಧಾರದಮೇಲೆ ಈ ಸಬ್ಸಿಡಿ ಸಿಗಲಿದೆ.
ಈಗಾಗಲೇ ಕೋಟ್ಯಂತರ ಕುಟುಂಬಗಳು ಇದರ ಪ್ರಯೋಜನ ಪಡೆದಿದ್ದು, ಇದೀಗ ಹೆಚ್ಚುವರಿಯಾಗಿ ಮತ್ತೊಂದು25 ಲಕ್ಷ ಹೊಸ ಗ್ಯಾಸ್ ಸಂಪರ್ಕಗಳನ್ನು ನೀಡಲು ಅನುಮೋದನೆ ನೀಡಲಾಗಿದೆ. ಹೊಸ ಸಂಪರ್ಕ ಪಡೆದವರಿಗೂ ಮುಂದಿನ ಪ್ರತಿ ಸಿಲಿಂಡರ್ ರೀಫಿಲ್ ಮೇಲೆಯೂ ₹300 ಸಬ್ಸಿಡಿ ಲಭ್ಯವಾಗಲಿದೆ.
ಇನ್ನು ಅರ್ಜಿ ಸಲ್ಲಿಸುವ ನಿಯಮಗಳನ್ನು ನೋಡುವುದಾದರೆ ಅರ್ಜಿದಾರ ಮಹಿಳೆಗೆ ಕನಿಷ್ಠ 18 ವರ್ಷ ತುಂಬಿರಬೇಕು. ಬಿಪಿಎಲ್ ಪಡಿತರ ಚೀಟಿ (Ration Card), ಆಧಾರ್‌ಕಾರ್ಡ್ ಹಾಗೂ ಬ್ಯಾಂಕ್‌ಖಾತೆಯ ವಿವರಗಳು ಕಡ್ಡಾಯ. ಅರ್ಹ ಫಲಾನುಭವಿಗಳು ಅಧಿಕೃತ ಉಜ್ವಲಯೋಜನೆ ವೆಬ್‌ಸೈಟ್ ಮೂಲಕ ಅಥವಾ ಹತ್ತಿರದ ಗ್ಯಾಸ್ ಏಜೆನ್ಸಿ ಕಚೇರಿಗೆ ಭೇಟಿ ನೀಡಿ ನೇರವಾಗಿ ಅರ್ಜಿ ಸಲ್ಲಿಸಬಹುದು ಎಂದು ಜಾಲತಾಣ ಮೂಲಗಳು ವರದಿ ಮಾಡಿವೆ.













