ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆಗಳ ಖರೀದಿಗಾಗಿ 1ರೂ. ಅನುದಾನ ಹೆಚ್ಚಳ!! ಶಿಕ್ಷಕರ ಮೊಗದಲ್ಲಿ ಸಂತಸ!!

ಉಡುಪಿ: ಸರಕಾರಿ ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆಗಳ ಖರೀದಿಗಾಗಿ ಶಾಲೆಗಳಿಗೆ ನೀಡುವ ಅನುದಾನವನ್ನು ಹೆಚ್ಚಿಸುವ ಮೂಲಕ ಶಿಕ್ಷಕರ ಜೇಬಿಗೆ ಬೀಳುವ ಹೊರೆಯನ್ನು ತಗ್ಗಿಸಲು ಕೊನೆಗೂ ಸರಕಾರ ಮುಂದಾಗಿದೆ. ಮೊಟ್ಟೆಯೊಂದಕ್ಕೆ 1 ರೂ. ಹೆಚ್ಚಿಸಲು ಸರಕಾರಕ್ಕೆ ಮನಸ್ಸಿದ್ದರೂ ಮಾರುಕಟ್ಟೆಯಲ್ಲಿ ದರ ಏರಿಳಿತದಿಂದಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಿ.ಎಂ. ಪೋಷಣ್ ಅಭಿಯಾನದ ರಾಜ್ಯ ಕಚೇರಿಯಿಂದ ಅನುದಾನ ಹೆಚ್ಚಳ (ಮೊಟ್ಟೆಯೊಂದರ ಘಟಕ ವೆಚ್ಚ)ಕ್ಕೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅಂತಿಮ ಚರ್ಚೆಯೂ ಆಗಿದೆ. ಆದರೆ ಲಾಭ -ನಷ್ಟದ ಲೆಕ್ಕಾಚಾರದಿಂದ ಅಂತಿಮ ನಿರ್ಧಾರವನ್ನು ಮಾತ್ರ ಸರಕಾರ ಪ್ರಕಟಿಸಿಲ್ಲ.
ಮಾರುಕಟ್ಟೆಯಲ್ಲಿ ಮೊಟ್ಟೆ ದರ ದಿನದಿಂದ ದಿನಕ್ಕೆ ಏರಿಳಿತ ಕಾಣುತ್ತಿದೆ. ಆದರೆ ಸರಕಾರಿ ಶಾಲೆಗಳ ಮಕ್ಕಳಿಗೆ ನೀಡುವ ಮೊಟ್ಟೆಗೆ ಸರಕಾರ ನಿಗದಿಪಡಿಸಿರುವ ದರ ಹಲವು ವರ್ಷಗಳಿಂದ 5.50 ರೂ. ಇದೆ. ಪರಿಣಾಮವಾಗಿ ಮಾರುಕಟ್ಟೆ ದರ ಮತ್ತು ಸರಕಾರ ನೀಡುವ ಅನುದಾನದ ನಡುವಿನ ವ್ಯತ್ಯಾಸವನ್ನು ಶಾಲಾ ಮುಖ್ಯಶಿಕ್ಷಕರು ತಮ್ಮ ಸ್ವಂತ ಹಣದಿಂದ ಭರಿಸುತ್ತಿದ್ದಾರೆ.

Advertisement

ಪ್ರಸ್ತುತ ಒಂದು ಮೊಟ್ಟೆಗೆ ಸರಕಾರದಿಂದ 6 ರೂ. ನೀಡಲಾಗುತ್ತಿದೆ. ಇದರಲ್ಲಿ 5.50 ರೂ. ಖರೀದಿಗೆ, 30 ಪೈಸೆ ಸಿಪ್ಪೆ ಸುಲಿಯುವ ಸಿಬಂದಿಗೆ ಹಾಗೂ ಉಳಿದ 20 ಪೈಸೆಯನ್ನು ಮೊಟ್ಟೆ ಬೇಯಿಸಲು ಬಳಸುವ ಗ್ಯಾಸ್ ವೆಚ್ಚಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ.ರೂ. ಇದೆ. ಕೆಲವು ಸಂದರ್ಭಗಳಲ್ಲಿ 7.75 ರಿಂದ 8 ರೂ. ವರೆಗೆ ಏರಿದ್ದೂ ಇದೆ. ದರ ಇಳಿಕೆಯ ಸಂದರ್ಭದಲ್ಲಿ 6- 6.30 ರೂ.ವರೆಗೆ ಇದ್ದು, ಸಾಮಾನ್ಯವಾಗಿ 6.50 ರಿಂದ 7 ರೂ. ನಡುವೆಯೇ ಇರುತ್ತದೆ.

Advertisement
Advertisement

ದಿನಕ್ಕೆ 200ರಿಂದ 300 ರೂ. ಹೊರೆ: ಒಂದು ಶಾಲೆಯಲ್ಲಿ 200 ಮಕ್ಕಳಿದ್ದರೆ, ಮಾರುಕಟ್ಟೆ ದರ ಮತ್ತು ಸರಕಾರದ ಅನುದಾನದ ನಡುವಿನ ವ್ಯತ್ಯಾಸ ದಿನಕ್ಕೆ ಕನಿಷ್ಠ 200ರಿಂದ 300ರೂ. ಆಗುತ್ತದೆ. ಈ ಮೊತ್ತವನ್ನು ಮುಖ್ಯ ಶಿಕ್ಷಕರು ಶಾಲೆಯ ಇತರ ಮೂಲಗ ಳಿಂದ ಅಥವಾ ಸ್ವಂತ ಹಣದಿಂದ ಭರಿಸಬೇಕಾಗುತ್ತದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನಷ್ಟದ ಲೆಕ್ಕಾಚಾರ ಇರುತ್ತದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page