ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಾರು ಅಪಘಾತವಾಗಿದ್ದು, ಶಾಸಕಿಯವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.
ನಿಂತಿಕಲ್ಲು ಕರಿಕ್ಕಳ ಮಾರ್ಗ ಮಧ್ಯೆ ಮುಚ್ಚಿಲ ಎಂಬಲ್ಲಿ ಎದುರಿನ ಕಾರೊಂದು ಸಡನ್ ಬ್ರೇಕ್ ಹಾಕಿದ ಪರಿಣಾಮ ಶಾಸಕಿಯವರ ಇನ್ನೋವಾ ಕಾರು ಜಖಂಗೊಂಡಿದೆ.
ಇನ್ನು ಕಾರಿನಲ್ಲಿದ್ದ ಶಾಸಕಿ, ಚಾಲಕ ಯಾವುದೇ ಗಾಯಗಳಿಲ್ಲದೆ ಪಾರಾದರು ಎಂದು ತಿಳಿದು ಬಂದಿದೆ.













