ರಾಜ್ಯದ ಜನರಿಗೆ ನಂದಿನಿ ಹಾಲಿನ ದರ ಏರಿಕೆಯಾಗುವುದು ಬಹತೇಕ ಖಚಿತವಾಗಿದೆ. ರಾಜ್ಯ ಸಚಿವ ಸಂಪುಟವು ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 8 ಹೆಚ್ಚಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಹೊಸ ದರ ನವೆಂಬರ್ 1ರಿಂದ ಜಾರಿಗೆ ಬರುವ ಸಾಧ್ಯತೆ ಇದ್ದು, ದರ ಏರಿಕೆಯ ಹಣದಲ್ಲಿ ಹೆಚ್ಚಿನ ಪಾಲು ಹಾಲು ಉತ್ಪಾದಕರಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ಅಂತಿಮ ಜಾರಿಗೆ ಚುನಾವಣಾ ಆಯೋಗದ ಅನುಮತಿ ಅಗತ್ಯವಾಗಿರುವುದರಿಂದ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬರಬೇಕಿದೆ ಎಂದು ವರದಿಯಾಗಿದೆ.
8ರೂ ದರ ಏರಿಕೆಯಲ್ಲಿ 6 ರೂ ನೇರವಾಗಿ ರೈತರಿಗೆ ಹಾಗೂ 2 ರೂ ಹಾಲು ಒಕ್ಕೂಟಗಳಿಗೆ ನೀಡುವ 80:20 ಅನುಪಾತವನ್ನು ಸರ್ಕಾರ ಅನುಸರಿಸಲು ನಿರ್ಧರಿಸಿದೆ ಎನ್ನಲಾಗಿದೆ. ಹಾಲು ಒಕ್ಕೂಟಗಳು 70:30 ಅನುಪಾತವನ್ನು ಕೋರಿದ್ದರೂ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರಿಗೆ ಹೆಚ್ಚಿನ ಪಾಲು ಸಿಗುವ 80:20 ಮಾದರಿಯ ಪರವಾಗಿ ನಿಲುವು ವ್ಯಕ್ತಪಡಿಸಿದ್ದರು. ಹೀಗಾಗಿ ಹೊಸ ದರ ಜಾರಿಯಾದರೆ ಪ್ರತಿ ಲೀಟರ್‌ಗೆ ಹೆಚ್ಚುವರಿ 8 ರೂನಲ್ಲಿ ರೈತರಿಗೆ 6 ರೂ ತಲುಪಲಿದೆ.













