ಸಾಧಾರಣ ಮಳೆಗೆ ಆನೆಮಜಲಿನ ಕೋರ್ಟ್‌ ಕಂಪೌಂಡ್‌ ಕುಸಿತ! ಹೊಸ ಕಟ್ಟಡಕ್ಕೆ ವರ್ಷವಾಗುವ ಮುಂಚೆಯೇ ಅವಘಡ!! ಕೋರ್ಟ್‌ ಕಟ್ಟಡದ ಗುಣಮಟ್ಟದ ಬಗ್ಗೆಯೇ ಜನರಲ್ಲಿ ಸಂಶಯ!!!

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬನ್ನೂರು ಸಮೀಪದ ಆನೆಮಜಲು ಎಂಬಲ್ಲಿ ನೂತನ ನ್ಯಾಯಾಲಯ ಸಂಕೀರ್ಣದ ಕಂಪೌಂಡ್‌ ಇಂದು ಸುರಿದ ಚಿಕ್ಕ ಮಳೆಗೆ ಧರೆಗೆ ಉರುಳಿದೆ.

Advertisement

ಜನವರಿಯಲ್ಲಿ ಉದ್ಘಾಟನೆಗೊಂಡಿದ್ದ ಕೋರ್ಟ್‌ ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ಇದರ ಕಂಪೌಂಡ್‌ ಅರ್ಧ ಗಂಟೆ ಸುರಿದ ಸಾಧಾರಣ ಮಳೆಗೆ ಬಿದ್ದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Advertisement
Advertisement

ಇದೀಗ ಕಂಪೌಂಡ್‌ ಗುಣಮಟ್ಟವೇ ಹೀಗಿದ್ದರೆ ಇನ್ನು ಕೋರ್ಟ್‌ ಕಟ್ಟಡ ಎಷ್ಟು ವರ್ಷ ಬಾಳಿಕೆ ಬರಬಹುದು ಎಂಬ ಪ್ರಶ್ನೆ ಜನರಲ್ಲಿ ಮೂಡುವಂತಾಗಿದೆ. ಸದ್ಯ ಯಾರಿಗೂ ಹಾನಿಯಾಗಿಲ್ಲ ಎಂಬುದು ಸಮಾಧಾನಕರ ಸಂಗತಿ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page