ಭಾರತಕ್ಕೆ ಇಸ್ಲಾಮಿಸ್ಟ್‌ ಭಯೋತ್ಪಾದಕ ದಾಳಿ ಸಾಧ್ಯತೆ! ಇಸ್ರೇಲ್‌ ರಾಯಭಾರಿ ರುವೆನ್‌ ಅಜರ್‌ ಎಚ್ಚರ!!

ಹೊಸದಿಲ್ಲಿ: ಭಾರತ ಮತ್ತು ಇಸ್ರೇಲ್‌ ಎರಡೂ ಹೊಸ ಇಸ್ಲಾಮಿಸ್ಟ್‌ ಭಯೋತ್ಪಾದಕ ದಾಳಿಗಳ ಅಲೆ ಎದುರಿಸುವ ಸಾಧ್ಯತೆ ಇದೆ ಎಂದು ಭಾರತದಲ್ಲಿನ ಇಸ್ರೇಲ್‌ ರಾಯಭಾರಿ ರುವೆನ್‌ ಅಜರ್‌ ಎಚ್ಚರಿಸಿದ್ದಾರೆ. ಭಯೋತ್ಪಾದಕ ಸಂಘಟನೆಗಳು ಸರ್ಕಾರಗಳು ಮತ್ತು ಭದ್ರತಾ ಸಂಸ್ಥೆಗಳಿಗಿಂತ ವೇಗವಾಗಿ ಹೊಸ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುತ್ತಿವೆ ಎಂದು ಹೇಳಿದ್ದಾರೆ.

Advertisement

ಫ್ಲೈದುಬೈ ವಿಮಾನ ಅಪಹರಣ ಯತ್ನದ ಹಿನ್ನಲೆಯಲ್ಲಿ ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಜರ್‌ ಈ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದ ನೆರೆಹೊರೆಯಲ್ಲಿರುವ ಭಯೋತ್ಪಾದನ ಸಂಘಟನೆಗಳಿಗೆ ಹಮಾಸ್‌ ಪ್ರೇರಣೆಯಾಗುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಭಯೋತ್ಪಾದಕರು ನಮಗಿಂತ ವೇಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಚ್ಚರಿಕೆಯಿಂದ ಇರಬೇಕು. ಮುಂದಿ ಅಲೆಯನ್ನು ಎದುರಿಸಿ ಅದಕ್ಕಿಂತ ಮುನ್ನಡೆಯಲ್ಲಿರಬೇಕಾದರೆ ನಾವು ತ್ವರಿತವಾಗಿ ಕಾರ್ಯನಿರ್ವಹಿಸಬೇಕು. ಅಂತಹ ಮತ್ತೊಂದು ಅಲೆ ಬರಲಿದೆ ಎಂದು ಅಜರ್‌ ಹೇಳಿದ್ದಾರೆ. ಭಯೋತ್ಪಾದಕ ಸಂಘಟನೆಗಳು ಪರಸ್ಪರ ಹೆಚ್ಚು ಸಹಕರಿಸುತ್ತಿವೆ ಎಂದು ತಮಗೆ ಅನಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಜರ್‌, ಮಧ್ಯಪ್ರಾಚ್ಯದ ಹೊರಗೆ ಹಮಾಸ್‌ ನಡೆಸುತ್ತಿರುವ ಇತ್ತೀಚಿನ ಚಟುವಟಿಕೆಗಳನ್ನು ಉಲ್ಲೇಖಿಸಿದರು ಎಂದು ಪತ್ರಿಕಾ ಮೂಲಗಳು ವರದಿ ಮಾಡಿವೆ.

Advertisement
Advertisement

ಕಳೆದ ಒಂದು ವರ್ಷದಲ್ಲಿ ಹಮಾಸ್‌ನ ಹಲವು ಹಿರಿಯ ಕಮಾಂಟರ್‌ಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page