ಪುತ್ತೂರು : ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶಾರದಾ ಭಜನಾ ಮಂದಿರದ ಆಶ್ರಯದಲ್ಲಿ ನಡೆಯುವ 92ನೇ ವರ್ಷದ ಪುತ್ತೂರು ದಸರಾದ ಅಂಗವಾಗಿ ಮಂದಿರದಲ್ಲಿ ವೇದಮೂರ್ತಿ ಕೆಮ್ಮಿಂಜೆ ಕಾರ್ತಿಕ ತಂತ್ರಿಗಳ ವೈದಿಕ ನೇತೃತ್ವದಲ್ಲಿ ಶಾರದಾ ದೇವಿಗೆ ಚಂಡಿಕಾ ಹೋಮವು ಸುಸೂತ್ರವಾಗಿ ನೆರವೇರಿತು.
ಸಾಕಷ್ಟು ಇತಿಹಾಸವನ್ನು ಹೊಂದಿರುವ ಶಾರದಾ ಭಜನಾ ಮಂದಿರದಲ್ಲಿ ಶಾರದಾ ಮಾತೆಗೆ ಚಂಡಿಕಾ ಹೋಮವು ಸಂಪನ್ನಗೊಂಡಿದ್ದು, ಭಕ್ತರು ಕಣ್ತುಂಬಿಕೊಂಡರು.
ಸುಡುಮದ್ದು, ಡಿಜೆ ಇಲ್ಲದ ಪ್ರಥಮ ಪುತ್ತೂರು ದಸರಾ ಎಂಬ ಹೆಗ್ಗಳಿಕೆಗೆ ಶ್ರೀ ಶಾರದಾ ಭಜನಾ ಮಂದಿರ ಪಾತ್ರವಾಗಿದ್ದು, ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಇಲ್ಲಿನ ವ್ಯವಸ್ಥೆ ಮತ್ತು ಶಿಸ್ತಿನ ಆದ್ಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುತ್ತೂರು ಜಾತ್ರೆಯ ರೀತಿಯಲ್ಲೇ ಇಡೀ ನಗರವೇ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿ, ನಾಡಿನ ಸಂಸ್ಕೃತಿಗೆ ಒತ್ತು ನೀಡಿರುವ ಈ ಬಾರಿಯ ಪುತ್ತೂರು ದಸರಾ ಹತ್ತೂರಿನ ಭಕ್ತರನ್ನೂ ತನ್ನತ್ತ ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.













