ಬೆಳ್ತಂಗಡಿ : ಇಲ್ಲಿನ ಕೊಕ್ಕಡ ಗ್ರಾಮದ ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್ ನ ಕಟ್ಟಡದ ಹೂವಿನ ವ್ಯಾಪಾರಸ್ಥರ ಮಧ್ಯೆ ಜಟಾಪಟಿ ನಡೆದಿದೆ.
ಈ ಕುರಿತು ಬೆಳ್ತಂಗಡಿ, ಕೊಕ್ಕಡ ನಿವಾಸಿ ಕೃಷ್ಣ ಭಟ್ ಎಂಬವವರು ದೂರು ನೀಡಿದ್ದು, ದೂರಿನಲ್ಲಿ ಉಲ್ಲೇಖಿಸಿದಂತೆ ಬೆಳ್ತಂಗಡಿ ಕೊಕ್ಕಡ ಗ್ರಾಮದ ಶ್ರೀ ಮಹಾ ಗಣಪತಿ ಸೇವಾ ಟ್ರಸ್ಟ್ ನ ಕಟ್ಟಡದ ಅಂಗಡಿಯಲ್ಲಿ ರಾಘವ ಭಂಡಾರಿ ಎಂಬವರು ಮತ್ತು ಅವರ ಕೆಲಸದವರು ವ್ಯಾಪಾರ ಮಾಡುತ್ತಿದ್ದಾಗ, ಸದ್ರಿ ಅಂಗಡಿಯಲ್ಲಿ ಈ ಹಿಂದೆ ವ್ಯಾಪಾರ ನಡೆಸುತ್ತಿದ್ದ ಆರೋಪಿತ ಹರೀಶ್ ಮತ್ತು ಅವರ ಹೆಂಡತಿ ಮಕ್ಕಳು ಹಾಗೂ ಇತರರು ಏಕಾಎಕಿ ಅಂಗಡಿಯ ಒಳಗೆ ಬಂದು ಸುಮಾರು 25,000/ ರೂ ಅಂದಾಜು ಮೌಲ್ಯದ ಕಟ್ಟಡ ಹಾಗೂ ಸ್ವತ್ತುಗಳನ್ನು ಹಾನಿ ಮಾಡಿ ರಾಘವ ಭಂಡಾರಿ ಮತ್ತು ಅವರ ಕೆಲಸದವರಿಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 78/2026, ಕಲಂ: 115(2), 118(1), 324(4), 329(4), 351(2), 352 R/W 190 ಬಿ ಎನ್ ಎಸ್ -2023 ರಂತೆ ಪ್ರಕರಣ ದಾಖಲಾಗಿರುತ್ತದೆ.
ಇನ್ನುಳಿದಂತೆ ಸೌತಡ್ಕ ದೇವಸ್ಥಾನದ ಬಳಿ ಅಂಗಡಿಯಲ್ಲಿ ಹರಿಶ್ಚಂದ್ರರವರು ವ್ಯಾಪಾರ ಮಾಡಿಕೊಂಡಿದ್ದಾಗ ಆರೋಪಿಗಳಾದ ರಾಘವ ಭಂಡಾರಿ, ಲಿಂಗಪ್ಪ, ಕಿಶೋರ್, ಚೇತನ್ ಎಂಬವರುಗಳು ಅಂಗಡಿಗೆ ಅಕ್ರಮವಾಗಿ ಪ್ರವೇಶಿಸಿ, ಅಂಗಡಿಯ ಸೊತ್ತುಗಳನ್ನು ಹೊರಗೆ ಬಿಸಾಡಿ, ಹರಿಶ್ಚಂದ್ರರವರಿಗೆ, ಅವರ ಪತ್ನಿಗೆ ಹಾಗೂ ಕೆಲಸಗಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ, ಅನುಚಿತವಾಗಿ ವರ್ತಿಸಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ಹರಿಶ್ಚಂದ್ರರವರ ಪತ್ನಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 79/2026 ಕಲಂ: 329(4), 324(4), 352, 74, 118(1), 115(2), 351(2) R/W 3(5) BNS -2023 ರಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಎರಡೂ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.













