ಶಾರ್ದುಲಾ ವೇಷ ಧರಿಸಿ ಸ್ನೇಹಿತನ ಚಿಕಿತ್ಸೆಗೆ ನೆರವಾದ ಮಕ್ಕಳು! ಮಕ್ಕಳ ಮಾನವೀಯತೆಗೆ ಸಾಕ್ಷಿಯಾದ ದಸರಾ ರಜೆ!

ಬಂಟ್ವಾಳ : ದಸರಾ ರಜೆ ಬಂತೆಂದರೆ ಮಕ್ಕಳಿಗೆ ಸಂಭ್ರಮ. ದಸರಾ ಸಮಯದಲ್ಲಿ ಬರುವ ಬೇರೆ ಬೇರೆ ವೇಷವನ್ನು ನೋಡುವುದೇ ಮಕ್ಕಳಿಗೆ ಖುಷಿ. ಆದರೆ ಈ ಮಕ್ಕಳು ಹಬ್ಬದ ಸಂಭ್ರಮದಲ್ಲಿ ವೇಷ ತೊಟ್ಟು ಕುಣಿದು ಗಳಿಸಿದ ಹಣವನ್ನು ಸ್ವಂತ ಖರ್ಚಿಗೆ ಬಳಸಿಕೊಳ್ಳದೆ, ಅಪಘಾತಕ್ಕೊಳಗಾಗಿ ಸಂಕಷ್ಟದಲ್ಲಿರುವ ಜೀವಕ್ಕೆ ನೆರವಾಗಿದ್ದಾರೆ ಸಜಿಪ ಪಡುವಿನ ಮುಗ್ಧ ಕಂದಮ್ಮಗಳು ಮಾನವೀಯತೆ ಮೆರೆದಿದ್ದಾರೆ.

Advertisement

ಹಬ್ಬದ ವೇಳೆಯಲ್ಲಿ ಶಾರ್ದೂಲ ಹಾಗೂ ನಾನಾ ವೇಷಭೂಷಣಗಳನ್ನು ಧರಿಸಿ ಊರೂರು ಸುತ್ತಿ ಸಂಗ್ರಹಿಸಿದ ಸುಮಾರು 5,000 ರೂ. ಹಣವನ್ನು ರಸ್ತೆ ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ಶಶಿಕಾಂತ್ ಅವರಿಗೆ ಹಸ್ತಾಂತರಿಸಿ ನೆರವಿನ ಹಸ್ತ ಚಾಚಿದ್ದಾರೆ. ಹಬ್ಬದ ಸಂಭ್ರಮದ ಸಂದರ್ಭದಲ್ಲಿ ನಾನಾ ವೇಷಗಳನ್ನು ತೊಟ್ಟು, ಮನೆಮನೆಗೆ ಹಾಗೂ ಊರೂರು ಸುತ್ತಿ ಈ ಪುಟ್ಟ ಮಕ್ಕಳು ಪ್ರೀತಿಯಿಂದ ಸಂಭಾವನೆ ಸಂಗ್ರಹಿಸಿದ್ದರು.

Advertisement
Advertisement

ಇತ್ತೀಚೆಗೆ ಭೀಕರ ರಸ್ತೆ ಅಪಘಾತಕ್ಕೀಡಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿಕಾಂತ್ ಅವರ ಕಷ್ಟಕ್ಕೆ ಸ್ಪಂದಿಸಿದ ಮಕ್ಕಳು, ತಾವು ಸಂಗ್ರಹಿಸಿದ ಸಂಪೂರ್ಣ ಮೊತ್ತ 5,000 ರೂ. ಅನ್ನು ಶಶಿಕಾಂತ್ ಅವರ ಮನೆಗೆ ತೆರಳಿ ಹಸ್ತಾಂತರಿಸಿದ್ದಾರೆ. ತಮ್ಮ ಖುಷಿಗಾಗಿ ಅಥವಾ ಮೋಜಿಗಾಗಿ ಆ ಹಣವನ್ನು ಖರ್ಚು ಮಾಡದೆ, ಕಷ್ಟದಲ್ಲಿರುವ ಜೀವಕ್ಕೆ ಆಸರೆಯಾದ ಈ ಮಕ್ಕಳ ನಿಸ್ಪೃಹ ಸೇವೆ ಹಾಗೂ ವಿಶಾಲ ಹೃದಯಕ್ಕೆ ಕರಾವಳಿ ಜನತೆ ಮತ್ತು ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ ಎಂದು ತಳಿದು ಬಂದಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page