ಫೆಸಿಫಿಕ್‌ ಸಾಗರದಲ್ಲಿ ಇತಿಹಾಸದಲ್ಲೇ ಗರಿಷ್ಠ ತಾಪಮಾನ! ಭಾರತದ ಹಿಂಗಾರು ಮಳೆಯಲ್ಲೂ ಭಾರೀ ಕೊರತೆ!!

ಎಲ್‌ ನಿನೋ ಪರಿಣಾಮದಿಂದ ಫೆಸಿಫಿಕ್‌ ಸಾಗರದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಅಮೆರಿಕ ಸಂಸ್ಥೆ ವರದಿಯಂತೆ, ಅ.22ರಂದು ಸಮುದ್ರದ ಮೇಲ್ಮೈ ತಾಪ 30 ಡಿ.ಸೆ.ಗೆ ತಲುಪಿದೆ. ಇದು ಇತಿಹಾಸದಲ್ಲೇ ಗರಿಷ್ಠ ತಾಪಮಾನವಾಗಿದೆ. 2015ರಲ್ಲಿ 29 ಡಿ. ಸೆ. ತಾಪಮಾನ ದಾಖಲಾಗಿತ್ತು ಎಂದು ವರದಿಯಾಗಿದೆ.

Advertisement

ಈ ತಾಪಮಾನ ಹೆಚ್ಚಳವು ಗಾಳಿ ಮತ್ತು ಮೋಡಗಳ ಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಮಳೆ ಪ್ರಮಾಣ ಕಡಿಮೆಯಾಗಿ ತಾಪಮಾನ ಹೆಚ್ಚಳವಾಗುತ್ತದೆ. ಫೆಸಿಫಿಕ್‌ ಸಾಗರದಲ್ಲಿನ ತಾಪಮಾನ ಹೆಚ್ಚಳದಿಂದಾಗಿ ಭಾರತವು ಸೇರಿ ಹಲವು ದೇಶಗಳಲ್ಲಿ ಮಳೆ ಕೊರತೆಯಾಗಲಿದೆ. ಡಿಸೆಂಬರ್‌ ವೇಳೆಗೆ ಸಾಗರದ ಮೇಲಿನ ಉಷ್ಣಾಂಶದಲ್ಲಿ 3.7 ಡಿ.ಸೆ. ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಎಲ್‌ನಿನೋ ಪರಿಣಾಮದಿಂದ ಭಾರತದಲ್ಲಿ ಹಿಂಗಾರು ಮಳೆಯಲ್ಲೂ ಭಾರೀ ಕೊರತೆ ಎದುರಾಗುವ ಸಾಧ್ಯತೆಯಿದೆ ಎಂದು ಪತ್ರಿಕಾ ಮೂಲಗಳು ಹೇಳಿವೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page