ಅಂಗವಿಕಲ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ! ಕುಂದಾಪುರದಲ್ಲೊಂದು ಹೃದಯ ವಿದ್ರಾವಕ ಘಟನೆ!!

ಕುಂದಾಪುರ : ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾನಾಡಿ ಕೊರಗ ಕಾಲನಿಯಲ್ಲಿ ಕಳೆದ 14 ವರ್ಷದಿಂದ ಅಂಗವೈಕಲ್ಯದಿಂದ ಬಳಲುತ್ತಿದ್ದ ಮಗಳನ್ನು ಕತ್ತಿಯಿಂದ ಬರ್ಬರವಾಗಿ ಹತ್ಯೆಮಾಡಿ ಬಳಿಕ ಮನನೊಂದು ತಾಯಿ ಕೂಡಾ ಆತ್ಮಹತ್ಯೆಗೆ ಶರಣಾದ ಘಟನೆ ಅ.25 ರವಿವಾರದಂದು ಬೆಳಗ್ಗೆ 8.30ರ ಸುಮಾರಿಗೆ ಸಂಭವಿಸಿದೆ.

Advertisement

ಶಾನಾಡಿ ಕೊರಗ ಕಾಲನಿಯ ನಿವಾಸಿ ಸುಧಾಕರ ಅವರರ ಪುತ್ರಿ ಸುಪ್ರತಿ (14) ಹಾಗೂ ಪತ್ನಿ ನೇತ್ರಾವತಿ (40) ಮೃತ ದುರ್ವೈವಿಗಳು. ಸುಪ್ರತಿ ಬಾಲ್ಯ ದಿಂದಲೂ ಅಂಗ ವೈಕಲ್ಯತೆಯಿಂದ ಬಳಲುತ್ತಿದ್ದು, ನಡೆದಾಡಲಾಗದ ಸ್ಥಿತಿಯಲ್ಲಿದ್ದು, ಅವಳ ಚಿಕಿತ್ಸೆಗಾಗಿ ಎಷ್ಟೇ ಪ್ರಯತ್ನಿಸಿದರೂ ಕೂಡಾ ಸಾಧ್ಯವಾಗಲಿಲ್ಲ ಮಗಳ ಆರೈಕೆಯನ್ನು ನೇತ್ರಾವತಿಯೇ ಮಾಡುತ್ತಿದ್ದು, ಮಗಳ ಸ್ಥಿತಿಯನ್ನು ನೋಡಿ ತೀವ್ರ ಮನನೊಂದಿದ್ದಳು ಎಂದು ಮೃತ ನೇತ್ರಾವತಿಯ ಪತಿ ಸುಧಾಕರ ಅವರು ತಿಳಿಸಿದ್ದಾರೆ. ದಂಪತಿಗೆ ಎರಡು ವರ್ಷದ ಗಂಡು ಮಗುವಿದೆ. ಘಟನಾ ಸ್ಥಳಕ್ಕೆ ಅವರು ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಸುಧಾಕರ ಎಸ್‌. ನಾಯ್ಕ್‌, ಡಿವೈಎಸ್ಪಿ ಎಚ್‌.ಡಿ. ಕುಲಕರ್ಣಿ, ವೃತ್ತ ನಿರೀಕ್ಷಕ ಗೋಪಿಕೃಷ್ಣ, ಕೋಟ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಪ್ರವೀಣ್‌ ಕುಮಾರ್‌ ಆರ್.‌ ಅಪರಾಧ ವಿಭಾಗ ಮಹಾಂತೇಶ್‌ ಹಾಗೂ ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.

Advertisement
Advertisement

ಈ ಸಂದರ್ಭದಲ್ಲಿ ಕೊರಗ ಶ್ರೇಯೋಭಿವೃದ್ದಿ ಸಮಿತಿಯ ಅಧ್ಯಕ್ಷ ಗಣೇಶ್‌.ವಿ .ಕೆದೂರು ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಶರತ್‌ ಕುಮಾರ್‌ ಹೆಗ್ಡೆ, ಪ್ರಶಾಂತ್‌ ಶೆಟ್ಟಿ ಉಳ್ತೂರು, ಸುಕುಮಾರ್‌ ಶೆಟ್ಟಿ ಮತ್ತಿತರರು ಹಾಜರಿದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page