ತಮಿಳು ನಟ ಧನುಷ್‌ ರಾಜಕೀಯ ಪ್ರವೇಶ??!! ಧನುಷ್ ನರ್ಪಣಿ ಇಯಕ್ಕಂ ಸಂಘ ಆರಂಭ!!

ತಮಿಳು ಚಿತ್ರರಂಗದ ಜನಪ್ರಿಯ ನಟ ಧನುಷ್ ಅವರ ರಾಜಕೀಯ ಪ್ರವೇಶದ ಕುರಿತು ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಭಾನುವಾರ ತಮ್ಮ ಅಧಿಕೃತ ಅಭಿಮಾನಿ ಸಂಘದ 3,000ಕ್ಕೂ ಹೆಚ್ಚು ಮಹಿಳಾ ಪದಾಧಿಕಾರಿಗಳು ಮತ್ತು ಸ್ವಯಂಸೇವಕರನ್ನು ಭೇಟಿಯಾಗಲು ಅವರು ಸಿದ್ಧತೆ ನಡೆಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ನಟನ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ತಮಿಳುನಾಡಿನಲ್ಲಿ ಹೆಚ್ಚಾಗಿದೆ ಎಂದು ಜಾಲತಾಣ ಮಾಧ್ಯಮ ತಿಳಿಸಿದೆ.

Advertisement

ಚೆನ್ನೈ ಹೊರವಲಯದಲ್ಲಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಈ ಸಭೆ ನಡೆಯುವ ನಿರೀಕ್ಷೆಯಿದೆ. ಕಾರ್ಯಕ್ರಮಕ್ಕಾಗಿ ಆವರಣದಲ್ಲಿ ಧನುಷ್ ಅವರ ಭಾವಚಿತ್ರಗಳಿರುವ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ ಎಂದು ವರದಿಯಾಗಿದೆ.

Advertisement
Advertisement

ಇತ್ತೀಚೆಗೆ ಧನುಷ್ ಅವರ ಅಭಿಮಾನಿ ಸಂಘದ ಹೆಸರನ್ನು ‘ಧನುಷ್ ಫ್ಯಾನ್ಸ್ ಕ್ಲಬ್’ನಿಂದ ‘ಧನುಷ್ ನರ್ಪಣಿ ಇಯಕ್ಕಂ’ ಎಂದು ಬದಲಾಯಿಸಲಾಗಿದೆ. ತಮಿಳಿನಲ್ಲಿ ಈ ಹೆಸರು ‘ಧನುಷ್ ಕಲ್ಯಾಣ ಚಳವಳಿ’ ಎಂಬ ಅರ್ಥವನ್ನು ಹೊಂದಿದೆ. ಅಕ್ಟೋಬರ್ 14ರಂದು ಕೊಯಮತ್ತೂರಿನಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ಬದಲಾವಣೆಗೆ ಅಧಿಕೃತ ಅನುಮೋದನೆ ದೊರೆತಿದೆ. ಸಂಘದ ಹೊಸ ಲಾಂಛನವನ್ನೂ ಬಿಡುಗಡೆ ಮಾಡಲಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page