“ಪುತ್ತೂರು ದೀಪೋತ್ಸವ 2026” | ಲೋಗೋ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ!!

ಪುತ್ತೂರು ದೀಪೋತ್ಸವ ಸಮಿತಿಯ ವತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಡಿಸೆಂಬ‌ರ್ 8ರಂದು ನಡೆಯಲಿರುವ ವಿಶೇಷ ಕಾರ್ಯಕ್ರಮ ಪುತ್ತೂರು ದೀಪೋತ್ಸವದ ಲೋಗೋ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಅ. 26ರಂದು ಪುತ್ತೂರು ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.
ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪುತ್ತೂರು ದೀಪೋತ್ಸವವು ಶ್ರೀ ಮಹಾಲಿಂಗೇಶ್ವರನ ಸಾನಿಧ್ಯಕ್ಕೆ ಪೂರಕವಾಗಿ ಆಯೋಜನೆಗೊಂಡಿದ್ದು, 10 ಸಾವಿರಕ್ಕೂ ಅಧಿಕ ಮಹಿಳೆಯರು ದೀಪ ಬೆಳಗುವುದು ವಿಶೇಷ ಪರಿಕಲ್ಪನೆಯಾಗಿದೆ. ಮುಂದಿನ ದಿನಗಳಲ್ಲಿ ಪುತ್ತೂರು ದೇವಸ್ಥಾನ ಜೀರ್ಣೋದ್ಧಾರಗೊಳ್ಳಲಿದ್ದು, ನಿರಂತ ರವಾಗಿ ಭಕ್ತರ ಆಗಮನದ ದೃಷ್ಟಿಯಿಂದ ಹರಿಕಥೆ, ಯಕ್ಷಗಾನದಂತಹ ಕಾರ್ಯಕ್ರಮಗಳಿಗೆ ಅವಕಾಶ ನೀಡುವ ಯೋಜನೆಗಳಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಕರುಣಾಕರ ರೈ ದೇರ್ಲ ಮಾತನಾಡಿ, ಉತ್ತಮ ತಂಡದೊಂದಿಗೆ ಸಮಿತಿ ರಚನೆಯಾಗಿ ದೀಪೋತ್ಸವಕ್ಕೆ ಸಿದ್ಧತೆಗಳು ಆರಂಭಗೊಂಡಿದ್ದು, 15-18 ಲಕ್ಷ ರೂ. ವೆಚ್ಚದಲ್ಲಿ ಸಮಾರಂಭ ನಡೆಯಲಿದೆ ಎಂದರು.

Advertisement
Advertisement

ರಾಜ್ಯ ಸಹಕಾರ ಮಹಾಮಂಡಳಿಯ ನಿರ್ದೇಶಕ ಶಶಿಕುಮಾ‌ರ್ ಬಾಳ್ಕೊಟ್ಟು ಅವರು ಆಮಂತ್ರಣ ಪತ್ರಿಕೆ ರೈ ಬಿಡುಗಡೆಗೊಳಿಸಿದರು. ರಾಜ್ಯ ಸಹಕಾರ ಮಹಾಮಂಡಳಿಗೆ ನಿರ್ದೇಶಕರಾಗಿ ಆಯ್ಕೆಯಾದ ಅವರನ್ನು ಸಮ್ಮಾನಿಸಲಾಯಿತು. ಪುತ್ತೂರಿನ ಎಲುಬು ತಜ್ಞ ಡಾ। ಅಜಯ್ ಅವರು ಲೋಗೊ ಬಿಡುಗಡೆಗೊಳಿಸಿದರು. ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ಒಳತ್ತಡ್ಕ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು. ದೀಪೋತ್ಸವ ಸಮಿತಿಯ ಗೌರವಾ ಧ್ಯಕ್ಷ ಜಿ.ಎಲ್.ಬಲರಾಮ ಆಚಾರ್ಯ, ಮಹಿಳಾ ಗೌರವ ಸಲಹೆಗಾರೆ ಗೌರಿ ಬನ್ನೂರು ವೇದಿಕೆಯಲ್ಲಿದ್ದರು. ಸಮಿತಿಯ ಅಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಾ| ರವೀಶ್ ಪಡುಮಲೆ ಪ್ರಸ್ತಾವನೆಗೈದು, ಸಮಾರಂಭದಲ್ಲಿ ಕೆ.ಸೀತಾರಾಮ ರೈ ಸವಣೂರು ಅವರಿಗೆ ಪುತ್ತೂರುದ ಮುತ್ತು ಪ್ರಶಸ್ತಿ ಪ್ರದಾನ ಮಾಡುವುದಾಗಿ ಘೋಷಿಸಿದರು.

ಕೋಶಾಧಿಕಾರಿ ಎಸ್.ದಾಮೋದರ ಪಾಟಾಳಿ ವಂದಿಸಿದರು. ಸದಸ್ಯ ಮನ್ಮಥ್ ಜೆ.ಶೆಟ್ಟಿ ನಿರ್ವಹಿಸಿದರು. ಸಂಚಾಲಕ ಸಂತೋಷ್ ಕುಮಾರ್‌ರೈ ಗಾಡಿಗುಡ್ಡೆ ಸಹಕಾರ್ಯದರ್ಶಿ ಜಯಪ್ರಕಾಶ್ ರೈ ಚೆಲ್ಯಡ್ಕ ಸಹಕರಿಸಿದರು.

ಈ ಬಾರಿಯ ವಿಶೇಷತೆಗಳು :

  • ತೆಂಕು ಮತ್ತು ಬಡಗು ತಿಟ್ಟಿನ ಅಮೋಘ ಯಕ್ಷಗಾನ ಪ್ರದರ್ಶನ.
  • ಕೇರಳದ ಮೆಗಾ ತಿರುವಾದಿರ ನೃತ್ಯ.
  • ರಥಬೀದಿಯಲ್ಲಿ ಸಹಸ್ರ ಭಕ್ತಾದಿಗಳಿಂದ ಲಕ್ಷ ದೀಪೋತ್ಸವ.
  • ಧರ್ಮ ಸಭೆ.
  • ಡಾ. ವಿದ್ಯಾಭೂಷಣ, ಕು. ಮೇಧಾ ವಿದ್ಯಾಭೂಷಣ ಅವರಿಂದ ಭಕ್ತಿ ಸಂಗೀತ.
  • ತುಳು ಅಪ್ಪೆ ಕೂಟದಿಂದ ತುಳು ತಾಳಮದ್ದಳೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page