ಆರ್‌ಎಸ್‌ಎಸ್‌ ಮೆರವಣಿಗೆಯಲ್ಲಿ ಮುಸ್ಲಿಂ ನಾಯಕ! ಬದುಕಿನ ಭಾವನಾತ್ಮಕ ಕ್ಷಣವೆಂದ ವೆಲ್ಲೂರ್ ಇಬ್ರಾಹಿಂ!! ವಿಶೇಷ ಕ್ಷಣಕ್ಕೆ ಸಾಕ್ಷಿಯಾದ ವಿಜಯದಶಮಿ ಮೆರವಣಿಗೆ!!

ತಮಿಳುನಾಡು : ಪ್ರತಿ ವರ್ಷದಂತೆ ಈ ವರ್ಷವೂ ವಿಜಯದಶಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೆರವಣಿಗೆ ನಡೆದಿದೆ. ಕರ್ನಾಟಕದ ಕೆಲವಡೆ ಅನುಮತಿ ಜಟಾಪಟಿ ನಡೆದಿದ್ದರೆ, ತಮಿಳುನಾಡು ಸೇರಿದಂತೆ ದೇಶದ ಹಲವೆಡೆ ಆರ್‌ಎಸ್‌ಎಸ್‌ ಮೆರವಣಿಗೆ ನಡೆದಿದೆ. ಇನ್ನು ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ನಡೆದ ಆರ್‌ಎಸ್‌ಎಸ್‌ ಮೆರವಣಿಗೆಯಲ್ಲಿ ಮುಸ್ಲಿಂ ನಾಯಕರೊಬ್ಬರು ಭಾಗಿಯಾಗಿದ್ದು, ವಿಶೇಷವಾಗಿತ್ತು ಎಂದು ವರದಿಗಳು ಹೇಳಿವೆ.

Advertisement

ಚೆನ್ನೈನಲ್ಲಿ ನಡೆದ ಆರ್‌ಎಸ್‌ಎಸ್‌ ಮೆರವಣಿಗೆಯಲ್ಲಿ ಮುಸ್ಲಿಂ ನಾಯಕರೊಬ್ಬರು ಭಾಗಿಯಾಗಿದ್ದಾರೆ. ಸೈಯದ್ ಇಬ್ರಾಹಿಂ ಅಲಿಯಾಸ್ ವೆಲ್ಲೂರ್ ಇಬ್ರಾಹಿಂ ಎಂಬುವರೇ ಆರ್‌ಎಸ್‌ಎಸ್‌ ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಚೆನ್ನೈನ ಮೆಡವಕ್ಕಂನಲ್ಲಿ ಮೆರವಣಿಗೆ ಮತ್ತು ಸಾರ್ವಜನಿಕ ಸಭೆ ನಡೆಸಿತು. ಈ ಮೆರವಣಿಗೆ ಮತ್ತು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದು ಒಂದು ಭಾವನಾತ್ಮಕ ಕ್ಷಣವಾಗಿತ್ತು ಅಂತ ಸೈಯದ್ ಇಬ್ರಾಹಿಂ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Advertisement
Advertisement

ಸೈಯದ್‌ ಇಬ್ರಾಹಿಂ ತಮಿಳುನಾಡು ಬಿಜೆಪಿ ನಾಯಕ. ಅವರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಹರ್‌ ಘರ್‌ ತಿರಂಗ ಅಭಿಯಾನದ ರಾಷ್ಟ್ರೀಯ ಉಸ್ತುವಾರಿ ಕೂಡ ಆಗಿದ್ದಾರೆ. ಅವರು ಆರ್‌ಎಸ್‌ಎಸ್‌ ಸ್ವಯಂಸೇವಕರಾಗಿ ಗುರುತಿಸಿಕೊಂಡಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page