ಕಾಮಿಡಿಗೆ ಪ್ರಾಮುಖ್ಯತೆ ನೀಡಿ ಸಾಂಪ್ರದಾಯಿಕ ಚೌಕಟ್ಟಿಗೆ ಸೀಮಿತವಾಗಿದ್ದ ಕರಾವಳಿಯ ತುಳು ಚಿತ್ರರಂಗದಲ್ಲಿ ಇದೀಗ ವಿಷಯಾಧಾರಿತ (ಕಂಟೆಂಟ್ ಓರಿಯೆಂಟೆಡ್) ಚಿತ್ರಗಳ ಹೊಸ ಅಲೆ ತುಳುನಾಡಿನ ದೈವಿಕ ನಂಬಿಕೆ, ಆಚಾರ-ವಿಚಾರ ಹಾಗೂ ನಿಗೂಢತೆಯನ್ನೊಳಗೊಂಡ ವಿಭಿನ್ನ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ಬಹುನಿರೀಕ್ಷಿತ ‘ಬನ’ ತುಳು ಚಲನಚಿತ್ರ ಬಿಡುಗಡೆಯಾಗಿ ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
ಈ ಸಂದರ್ಭದಲ್ಲಿ ಬನ ಸಿನೆಮಾದ ಪ್ರಮುಖ ನಟ ಶರತ್ ಆಳ್ವ ಕೂರೇಲು ಹಾಗೂ ಛಾಯಾಗ್ರಾಹಕ ಅರುಣ್ ರೈ ಅವರು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರನ್ನು ಭೇಟಿಯಾಗಿ ಸಿನೆಮಾದ ಪೋಸ್ಟರ್ ಹಂಚಿಕೊಂಡರು. ಈ ಸಂದರ್ಭದಲ್ಲಿ ಸಂಸದರು ಮೆಚ್ಚುಗೆ ಸೂಚಿಸಿ ನಮ್ಮ ಮಣ್ಣಿನ ಕಥೆಯ ಹಂದರವುಳ್ಳ ಇಂತಹ ಸಿನೆಮಾಗಳು ಕೋಸ್ಟಲ್ವುಡ್ಗೆ ಅತ್ಯಗತ್ಯವೆಂದು ಶುಭ ಹಾರೈಸಿದರು ಎಂದು ತಿಳಿದು ಬಂದಿದೆ.













