ದಕ್ಷಿಣ ಕನ್ನಡ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ! ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ಮಹತ್ವದ ಸುದ್ದಿಗೋಷ್ಠಿ!!

ಮಂಗಳೂರು: ರಾಜ್ಯದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)-2026 ಪ್ರಕ್ರಿಯೆ ಪೂರ್ಣಗೊಂಡಿದೆ. ಇದರನ್ವಯ ದಕ್ಷಿಣ ಕನ್ನಡ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಇಂದು ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ 9,064 ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ., ಜಿಲ್ಲೆಯಲ್ಲಿ ಪ್ರಕಟಗೊಂಡಿರುವ ಅಂತಿಮ ಮತದಾರರ ಪಟ್ಟಿಯಂತೆ ಒಟ್ಟು 16,78,448 ಮತದಾರರಿದ್ದಾರೆ. ಈ ಪೈಕಿ 8,23,198 ಪುರುಷರು ಹಾಗೂ 8,55,232 ಮಹಿಳಾ ಮತದಾರರಾಗಿದ್ದಾರೆ. 18 ತೃತೀಯ ಲಿಂಗಿ ಮತದಾರರಿದ್ದಾರೆ ಎಂದು ಹೇಳಿದರು.

Advertisement

ಆಗಸ್ಟ್ 24ರಂದು ಪ್ರಕಟಿಸಲಾಗಿದ್ದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು 16,46,387 ಮತದಾರರಿದ್ದರು. ಅಂತಿಮ ಪಟ್ಟಿಯಲ್ಲಿ ನೋಟಿಸ್ ನೀಡಿದ ಬಳಿಕ 32,061 ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದವರು ವಿವರಿಸಿದರು. ಮರಣ ಹಾಗೂ ಖಾಯಂ ಆಗಿ ಸ್ಥಳಾಂತರಗೊಂಡವರು ಸೇರಿ ಒಟ್ಟು 9,064 ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ತಿದ್ದುಪಡಿಗೆ ಸಂಬಂಧಿಸಿ 53,806 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement
Advertisement

ವಿಧಾನಸಭಾ ಕ್ಷೇತ್ರವಾರು ಅಂತಿಮ ಮತದಾರರ ಸಂಖ್ಯೆ ಹೀಗಿದೆ :
ಬೆಳ್ತಂಗಡಿ : 2,22,254
ಮೂಡುಬಿದಿರೆ: 1,97,712
ಮಂಗಳೂರು ನಗರ ಉತ್ತರ: 2,27,530
ಮಂಗಳೂರು ನಗರ ದಕ್ಷಿಣ: 2,12,512
ಮಂಗಳೂರು: 1,98,956
ಬಂಟ್ವಾಳ: 2,15,710
ಪುತ್ತೂರು: 2,04,181
ಸುಳ್ಯ: 1,99,593
ಸೇರ್ಪಡೆ ಮತ್ತು ರದ್ದತಿ ವಿವರ:
ಕರಡು ಪಟ್ಟಿ ಪ್ರಕಟಗೊಂಡ ನಂತರ ಬಂದ ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ
ಹೊಸ ಸೇರ್ಪಡೆ: 41,125 ಮತದಾರರು (ನಮೂನೆ-6ರಲ್ಲಿ 32,986, ನಮೂನೆ-6Aರಲ್ಲಿ 357 ಹಾಗೂ ನಮೂನೆ-8ರಲ್ಲಿ 7,782).
ಯುವ ಹಾಗೂ ವಿಶೇಷ ವರ್ಗದ ಮತದಾರರು:
ಯುವ ಮತದಾರರು (18-19 ವರ್ಷ): ಜಿಲ್ಲೆಯಲ್ಲಿ ಒಟ್ಟು 25,326 ಯುವ ಮತದಾರರಿದ್ದಾರೆ (ಕರಡು ಪಟ್ಟಿಯಲ್ಲಿದ್ದ 12,418 ರ ಜೊತೆಗೆ ಹೊಸದಾಗಿ 12,903 ಯುವ ಮತದಾರರು ಸೇರ್ಪಡೆಯಾಗಿದ್ದಾರೆ).
ಅಂಗವಿಕಲ ಮತದಾರರು: ಒಟ್ಟು 13,420 (7,607 ಪುರುಷರು, 5,813 ಮಹಿಳೆಯರು).
85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು: ಒಟ್ಟು 14,086 ಮತದಾರರು.
ಅನಿವಾಸಿ ಭಾರತೀಯ (NRI) ಮತದಾರರು: ಒಟ್ಟು 366 (210 ಪುರುಷರು, 156 ಮಹಿಳೆಯರು).
ಸೇವಾ ಮತದಾರರು (Service Electors): ಒಟ್ಟು 449 ಮತದಾರರು.
ಆಕ್ಷೇಪಣೆ ಹಾಗೂ ವಿಚಾರಣೆ ವಿಲೇವಾರಿ:
ಅವಧಿಯಲ್ಲಿ ಸ್ವೀಕೃತಗೊಂಡ ಒಟ್ಟು 1,50,131 ನೋಟೀಸ್ ಮತ್ತು ವಿಚಾರಣೆಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲಾಗಿದ್ದು, ಯಾವುದೇ ಪ್ರಕರಣ ಬಾಕಿ ಉಳಿದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಮಾಹಿತಿ ಹಾಗೂ ಪರಿಶೀಲನೆಗೆ ಅವಕಾಶ:
ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿತವಾಗಿರುವ ಬಗ್ಗೆ ಪರಿಶೀಲಿಸಲು ಈ ಕೆಳಗಿನ ಮಾರ್ಗಗಳನ್ನು ಬಳಸಬಹುದು:
ಮತದಾರರ ನೋಂದಣಾಧಿಕಾರಿ (ERO) / ಸಹಾಯಕ ಮತದಾರರ ನೋಂದಣಾಧಿಕಾರಿ (AERO) ಕಚೇರಿ.
ಆಯಾ ವ್ಯಾಪ್ತಿಯ ಮತಗಟ್ಟೆ ಮಟ್ಟದ ಅಧಿಕಾರಿ (BLO).

ವೆಬ್‌ಸೈಟ್‌ಗಳು: www.ceokarnataka.kar.nic.in, https://voters.eci.gov.in ಮತ್ತು www.dk.nic.in.
ಸಹಾಯವಾಣಿ: 1950 ಉಚಿತ ಕರೆ ಸಂಖ್ಯೆಗೆ ಸಂಪರ್ಕಿಸಬಹುದು.
ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇನ್ನು ಮುಂದೆ ಕೂಡ ಅರ್ಹ ನಾಗರಿಕರು ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page