ಮೂಡುಬಿದಿರೆ : ಇಲ್ಲಿನ ಪಿಂಗಾರ ಕಲಾವಿದೆರ್ ಬೆದ್ರ ಅವರ ರಂಗಭೂಷಣ ಮಣಿ ಕೋಟೆಬಾಗಿಲು ಕಥೆ, ಸಂಭಾಷಣೆ, ನಿರ್ದೇಶನ ಮತ್ತು ಸಾರಥ್ಯದ ಕದಂಬ ಹಾಗೂ ಓಂಕಾರ ನಾಟಕದ ಬಳಿಕ ಸಾಮಾಜಿಕ ನಾಟಕಕ್ಕೊಂದು ಹೊಸ ಸ್ಪರ್ಶ ನೀಡಿ “ಪ್ರಶ್ನಾರ್ಥಕ” ಎಂಬ ತುಳು ಸಾಮಾಜಿಕ ಹಾಸ್ಯ ನಾಟಕದ ಪ್ರಥಮ ಪ್ರದರ್ಶನ ಅಕ್ಟೋಬರ್ 31 ಶನಿವಾರದಂದು ಸಂಜೆ 07 ಗಂಟೆಗೆ ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಲಿದೆ.
ನಾಳೆ ನಾಟಕದ ಉಚಿತ ಪ್ರದರ್ಶನ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಘಟಕರು ವಿನಂತಿಸಿದ್ದಾರೆ. ನಾಟಕ ಬುಕ್ಕಿಂಗ್ಗಳಿಗಾಗಿ (9845838637, 9663626488) ಸಂಪರ್ಕಿಸಲು ಕೋರಲಾಗಿದೆ.















