ಪುತ್ತೂರು : ದೀಪಾವಳಿ ಹಬ್ಬದ ಪ್ರಯುಕ್ತ ಶಾಸಕ ಅಶೋಕ್ ರೈ ಅವರ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗುತ್ತಿರುವ ಅಶೋಕ ಜನಮನ ಕಾರ್ಯಕ್ರಮದ ಅಂಗವಾಗಿ ಆರ್ಯಾಪು (ಮರಿಕೆ) ಗ್ರಾಮದ ಎಸ್.ಎಸ್.ಟಿ. ಕಾಲೋನಿಯಲ್ಲಿ ಗ್ರಾಮ ಭೇಟಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್ನ ನಿಹಾಲ್ ಪಿ ಶೆಟ್ಟಿ ದೀಪಾವಳಿಯ ಸಂತೋಷವನ್ನು ಸಮಾಜದ ಪ್ರತಿಯೊಂದು ಕುಟುಂಬದೊಂದಿಗೆ ಹಂಚಿಕೊಳ್ಳುವ ಸದುದ್ದೇಶದಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ಜನರೊಂದಿಗೆ ಆತ್ಮೀಯ ಸಂಬಂಧವನ್ನು ಬೆಸೆಯುವ ಹಾಗೂ ಸಮಾಜದಲ್ಲಿ ಪ್ರೀತಿ, ವಿಶ್ವಾಸ ಮತ್ತು ಒಗ್ಗಟ್ಟನ್ನು ಬಲಪಡಿಸುವ ಮಹತ್ವದ ಪ್ರಯತ್ನವಾಗಿದೆ. ಅಶೋಕ ಜನಮನ ಎನ್ನುವುದು ಕೇವಲ ಸೀರೆ ಮತ್ತು ತಟ್ಟೆಗಳನ್ನು ವಿತರಿಸುವ ಕಾರ್ಯಕ್ರಮವಲ್ಲ; ಪ್ರತಿಯೊಂದು ಕುಟುಂಬದೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ, ಜನರ ಪ್ರೀತಿ ಮತ್ತು ವಿಶ್ವಾಸಕ್ಕೆ ಗೌರವ ನೀಡುವ ಆತ್ಮೀಯ ಪ್ರಯತ್ನವಾಗಿದೆ. ಈ ದೀಪಾವಳಿಯ ಬೆಳಕು ಪ್ರತಿಯೊಂದು ಮನೆಯಲ್ಲೂ ಸಂತೋಷವನ್ನು ಮೂಡಿಸಲಿ ಎಂಬುದೇ ನಮ್ಮ ಆಶಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಮುಂಬರುವ ಜನಮಾನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟ್ನ ಸದಸ್ಯರಾದ ಮಹಾಬಲ ರೈ, ಟ್ರಸ್ಟ್ನ ಸದಸ್ಯರಾದ ದಾಮೋದರ ಬಂಡಾರ್ಕರ್, ಬಾಬು ಮರಿಕೆ, ಸದಾನಂದ ಶೆಟ್ಟಿ, ಗಿರೀಶ್ ರೈ, ಶುಭಾ ರೈ ಸೇರಿದಂತೆ ಗ್ರಾಮದ ಹಲವು ಪ್ರಮುಖರು ಹಾಗೂ ಗಣ್ಯರು ಭಾಗವಹಿಸಿದರು.
















