ಡಿಜಿಟಲ್‌ ಅರೆಸ್ಟ್‌ ಆದರೆ ಬ್ಯಾಂಕ್‌ಗಳೇ ನಷ್ಟ ಭರಿಸಬೇಕು! ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ!!

ಡಿಜಿಟಲ್‌ ವಂಚನೆ ಪ್ರಕರಣಗಳಲ್ಲಿ ಬ್ಯಾಂಕ್‌ಗಳ ವೈಫಲ್ಯ ಕಂಡುಬಂದರೆ, ಸಂತ್ರಸ್ತರ ನಷ್ಟವನ್ನು ಭರಿಸಲು ಬ್ಯಾಂಕ್‌ಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಆರ್ಥಿಕ ಸಂಸ್ಥೆಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಲ್ಲಿ ವಿಫಲವಾಗಿ ಡಿಜಿಟಲ್ ಅರೆಸ್ಟ್‌ನಂತಹ ಅಪರಾಧಗಳು ಸಂಭವಿಸಿದರೆ, ಸಂತ್ರಸ್ತರು ಕಳೆದುಕೊಂಡ ಕನಿಷ್ಠ ಮೊತ್ತವನ್ನಾದರೂ ಬ್ಯಾಂಕ್‌ಗಳು ಪರಿಹಾರವಾಗಿ ನೀಡಬೇಕು ಎಂದು ಕೋರ್ಟ್ ಹೇಳಿದ್ದಾಗಿ ವರದಿಯಾಗಿದೆ.

Advertisement

ಪ್ರಸಕ್ತ ವರ್ಷ ಸೈಬರ್‌ ಅಪರಾಧ ಪ್ರಕರಣ ಇಳಿಕೆಯಾಗಿದ್ದರೂ, ಸಾರ್ವಜನಿಕರ 800 ಕೋಟಿ ರು. ಲೂಟಿ ಆಗಿರುವುದನ್ನು ಗಂಭೀರ ಎಂದು ಹೇಳಿದ ಮುಖ್ಯ ನ್ಯಾ.ಸೂರ್ಯಕಾಂತ್, ನ್ಯಾ.ಜೋಯ್‌ಮಲ್ಯಾ ಬಗ್ಚಿ ಮತ್ತು ನ್ಯಾ.ವಿ.ಮೋಹನಾ ಅವರನ್ನೊಳಗೊಂಡ ಪೀಠವು, ಆರ್‌ಬಿಐ ಪ್ರಸ್ತಾಪಿಸಿರುವ ಹೊಸ ಸೈಬರ್‌ ವಂಚನೆ ನಿಯಂತ್ರಣಾ ಕ್ರಮಗಳು, ಹಣ ಕಳೆದುಕೊಂಡವರಿಗೆ ಪರಿಹಾರ, ವಂಚನೆ ತಡೆಯಲು ಕ್ರಮ ಮತ್ತು ವಂಚನೆ ಪ್ರಕರಣಗಳಲ್ಲಿ ಹೊಣೆಗಾರರನ್ನು ಗುರುತಿಸುವ ಅಂಶಗಳನ್ನು ಒಳಗೊಂಡಿರಬೇಕು ಎಂದು ಸೂಚಿಸಿದೆ.

Advertisement
Advertisement

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page