ಚಿತ್ತಾಪುರ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅನುಮತಿ! ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾದರೆ ಆಯೋಜಕರೇ ಹೊಣೆ!!

ಚಿತ್ತಾಪುರ : ವಿಜಯದಶಮಿ ಉತ್ಸವದ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಅ.31 ರಂದು ಪಟ್ಟಣದಲ್ಲಿ ಹಮ್ಮಿಕೊಂಡಿರುವ ಪಥಸಂಚಲನಕ್ಕೆ ವಿವಿಧ ಷರತ್ತುಗಳೊಂದಿಗೆ ಪೊಲೀಸ್ ಇಲಾಖೆಯಿಂದ ಪಥಸಂಚಲನಕ್ಕೆ ಅವಕಾಶ ನೀಡಿದೆ ಎಂದು ತಿಳಿದು ಬಂದಿದೆ.

Advertisement

ಪಥಸಂಚಲನ ಹಾಗೂ ಕಾರ್ಯಕ್ರಮವನ್ನು ಅ.31 ರಂದು ಮಧ್ಯಾಹ್ನ 3 ಗಂಟೆಯಿಂದ ಸಾಯಾಂಕಾಲ 7 ಗಂಟೆಯ ನಡುವೆ ನಡೆಸಿ ಪೂರ್ಣಗೊಳಿಸಬೇಕು. ಸಮಯವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಚಿತ್ತಾಪುರ ತಾಲೂಕಿನ ಜನರಷ್ಟೇ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಪೊಲೀಸ್ ಇಲಾಖೆಯಿಂದ ನಿಗಧಿ ಪಡಿಸಿರುವ ಮಾರ್ಗಗಳಾದ ಬಜಾಜ್ ಕಲ್ಯಾಣ ಮಂಟಪ, ಬಸ್ ನಿಲ್ದಾಣ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತ, ಭುವನೇಶ್ವರಿ ಚೌಕ್, ಜನತಾ ಚೌಕ್, ನಾಗಾವಿ ಚೌಕ್, ನಂದಕಿಶೋರ್ ಬಜಾಜ್ ಮನೆಯ ಎದರುಗಡೆ, ಶ್ರೀ ಸೇವಾಲಾಲ್ ಚೌಕ್, ಪುರಸಭೆ ಕಾರ್ಯಲಯ, ಹಳೇ ಗಂಜ್ ವೃತ್ತ, ಕಾಶಿಗಲ್ಲಿ ಗಣೇಶ ಮಂದಿರ, ಲಾಡ್ಡಿಂಗ್ ಕ್ರಾಸ್, ಬಜಾಜ್ ಕಲ್ಯಾಣ ಮಂಟಪದ ಈ ಮಾರ್ಗದಲ್ಲಿಯೇ ಪಥಸಂಚಲನ ಕೈಗೊಳ್ಳುವುದು, ಬೇರೆ ಯಾವುದೇ ಮಾರ್ಗ ಬಳುಸುವಂತಿಲ್ಲ ಎಂದು ಅನುಮತಿಯಲ್ಲಿ ತಿಳಿಸಲಾಗಿದೆ.

Advertisement
Advertisement

ಪಥಸಂಚಲನ ಕಾರ್ಯಕ್ರಮವನ್ನು ಬಜಾಜ್ ಕಲ್ಯಾಣ ಮಂಟಪ ಆವರಣದಲ್ಲಿಯೇ ಕಟ್ಟು ನಿಟ್ಟಾಗಿ ನಡೆಸಬೇಕು. ಮಾರ್ಗ ನಕ್ಷೆ ಪ್ರಕಾರ ಕಾರ್ಯಕ್ರಮ ಹೊರತು ಪಡಿಸಿ ಯಾವುದೇ ಸಾರ್ವಜನಿಕ ಸ್ಥಳಗಳು, ಬೀದಿಗಳಲ್ಲಿ ಯಾವುದೇ ಭಾಷಣಗಳನ್ನು ಅಥವಾ ಕಾರ್ಯಕ್ರಮಗಳನ್ನು ಆಯೋಜಿಸಬಾರದು, ಸ್ಥಳಗಳು/ಬೀದಿಗಳಲ್ಲಿ ಯಾವುದೇ ಭಾಷಣಗಳನ್ನು ಅಥವಾ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ಕಾರ್ಯಕ್ರಮದ ಆಯೋಜಕರು ಭಾಗವಹಿಸುವವರು ಆಹ್ವಾನಿತರು ಯಾವುದೆ ರಾಜಕೀಯ ಭಾಷಣಗಳನ್ನು ಮಾಡಬಾರದು ಮತ್ತು ಯಾವುದೇ ಪ್ರಚೋದನಕಾರಿ ಭಾಷೆ ಅಥವಾ ಘೋಣೆಗಳನ್ನು ಬಳಸಬಾರದ್ದು ಧ್ವಜಗಳು, ಬ್ಯಾನರ್‌ಗಳು, ಬಂಟಿಂಗ್ ಗಳನ್ನು ಅಳವಡಿಸಲು ಸಕ್ಷಮ ಅಧಿಕಾರಿಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಹಾಗೂ ಬ್ಯಾನರ್ ಮತ್ತು ಬಂಟಿಂಗ್‌ಗಳಲ್ಲಿ ಯಾವುದೇ ಪ್ರಚೋದನಾತ್ಮಕ ಘೋಷಣೆಗಳನ್ನು ಮುದ್ರಿಸಬಾರದು ಎಂದು ತಿಳಿದು ಬಂದಿದೆ.

ಸಮಾರಂಭದ ಆಯೋಜಕರು ಹಾಗೂ ಭಾಗವಹಿಸುವರು ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಸ್ಥಳೀಯ ಅಡಳಿತದೊಂದಿಗೆ ಸಹಕರಿಸಬೇಕು. ಪಥಸಂಚಲನ ಹಾಗೂ ಸಮಾರಂಭದ ಸಮಯದಲ್ಲಿ ಧ್ವನಿವರ್ಧಕ ಬಳುಸುವಂತದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಪರವಾನಿಗೆ ಪಡೆದುಕೊಳ್ಳಬೇಕು.
ಪಥಸಂಚಲನ ಹಾಗೂ ಸಮಾರಂಭದ ಸಮಯದಲ್ಲಿ ಸಾರ್ವಕನಿಕರಿಗೆ ಮತ್ತು ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು, ನೂಕು ನುಗ್ಗಲು ಆಗದಂತೆ ನೋಡಿಕೊಳ್ಳುವುದು, ಯಾವುದೇ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾದಲ್ಲಿ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ಅದರ ನಷ್ಟವನ್ನು ತಮ್ಮ ಕಡೆಯಿಂದ ಭರಿಸಲಾಗುವುದು ಮಾತ್ರವಲ್ಲದೆ ಯಾವುದೇ ಆಹಿತಕರ ಘಟನೆಯಾಗದಂತೆ ಆಯೋಜಕರು ನೋಡಿಕೊಳ್ಳಬೇಕೆಂಬ ಷರತ್ತುಗಳೊಂದಿಗೆ ಪರವಾನಗಿ ನೀಡಿದೆ ಎಂದು ಮೂಲಗಳು ವರದಿ ಮಾಡಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page