ಸ್ನೇಹಿತನ ಪ್ರೇಯಸಿ ವೇಶ್ಯೆಯೆಂದು ಭಾವಿಸಿ ಅತ್ಯಾಚಾರ! ಅತ್ಯಾಚಾರಿಗೆ ಬುದ್ದಿ ಕಲಿಸಲು ಹೋದ 11 ಮಂದಿಯ ಬಂಧನ!!

ಬೆಂಗಳೂರು: ಸ್ನೇಹಿತನ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ ಟೆಕಿ ಮತ್ತು ಆತನಿಗೆ ಸಹಾಯ ಮಾಡಿದವನಿಗೆ ಬುದ್ದಿ ಕಲಿಸಲು ಆ ಇಬ್ಬರನ್ನು ಅಪಹರಿಸಿದ್ದ ಸಂತ್ರಸ್ತೆ ಸೇರಿದಂತೆ 11 ಮಂದಿಯನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗಾಲೇಟಿ ರಾಜಕುಮಾರ್(24), ಮರಿ ಪಾಟಿ ಮಂಜುನಾಥ (23), ಚಿನಿಗೆಪಲ್ಲಿ ಲೋಕನಾಥ್ (22), ಬಂಡ್ಲಪಲ್ಲಿ ಸುಹೇಲ್ (22), ಗಂಗಾರೆಡ್ಡಿಗಾರಿ ನರೇಂದ್ರ ರೆಡ್ಡಿ (22), ಶಿವಸುಬ್ರಮಣ್ಯಂ (24), ಸಲೀಂ ಪಾಷಾ (30), ನಯೀಂ ಪಾಷಾ (31), ಶಬಾಜ್ (26), ಗಾಲಿ ರಾಜೇಶ್ (20) ಹಾಗೂ 21 ವರ್ಷದ ಯುವತಿಯನ್ನು ಬಂಧಿಸಲಾಗಿದೆ. ಆರೋಪಿಗಳು ಅ.28ರಂದು ಬಿ.ಮಹೇಂದ್ರ ಮತ್ತು ಆತನ ಸ್ನೇಹಿತ ತರುಣ್ ಎಂಬಾತನನ್ನು ಅಪಹರಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.

Advertisement

ಆಂಧ್ರಪ್ರದೇಶ ಮೂಲದ ಮಹೇಂದ್ರ ಹಾಗೂ ತರುಣ್ ಹಾಗೂ ಆರೋಪಿಗಳ ಪೈಕಿ ಮಂಜುನಾಥ್ ಮಾರತ್ತಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ಅ.24ರಂದು ಆರೋಪಿಗಳ ಪೈಕಿ ಮಂಜು ತನ್ನ ಊರಾದ ಆಂಧ್ರಪ್ರದೇಶದ ಮದನಪಲ್ಲಿಗೆ ತೆರಳಿದ್ದ. ಈ ವೇಳೆ ಮಂಜು ಸ್ನೇಹಿತ ರಾಜ್‌ಕುಮಾರ್‌ಕರೆ ಮಾಡಿ ತನ್ನ ಪ್ರೇಯಸಿಯೊಂದಿಗೆ ಒಂದು ದಿನ ಉಳಿದುಕೊಳ್ಳಲು ರೂಮ್ ಬೇಕೆಂದು ಕೇಳಿದ್ದಾನೆ. ಆಗ ಮಂಜು ತಾನು ಊರಿಗೆ ಬಂದಿರುವುದಾಗಿ ತಿಳಿಸಿ ತನ್ನ ಸ್ನೇಹಿತರನ್ನು ಸಂಪರ್ಕಿಸಿ ರೂಮ್‌ನ ಕೀ ಪಡೆದುಕೊಳ್ಳುವಂತೆ ಹೇಳಿದ್ದ. ಅದರಂತೆ ರಾಜ್‌ಕುಮಾರ್‌ ಮಹೇಂದ್ರಗೆ ಕರೆ ಮಾಡಿ ಮಂಜುನಾಥ್ ರೂಮ್ ಕೀ ಕೊಡುವಂತೆ ಕೇಳಿದ್ದಾನೆ. ನಂತರ ತನ್ನ ಪ್ರೇಯಸಿ ಜತೆ ಬಂದು ರೂಮ್‌ನಲ್ಲಿ ತಂಗಿದ್ದರು. ಅದೇ ಮನೆಯ ಮತ್ತೊಂದು ಕೋಣೆಯಲ್ಲಿ ತರುಣ್ ಮತ್ತು ಮಹೇಂದ್ರ ಇದ್ದರು. ಆಗ ಮಹೇಂದ್ರ ಮತ್ತು ತರುಣ್, ರಾಜ್‌ಕುಮಾರ್ ಜತೆ ಬಂದಿದ್ದ ಯುವತಿ ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ, ಮದ್ಯದ ಅಮಲಿನಲ್ಲಿದ್ದ ತಡರಾತ್ರಿ ರಾಜ್‌ಕುಮಾರ್ ನನ್ನು ಬಲವಂತವಾಗಿ ಮತ್ತೊಂದು ರೂಮ್‌ನಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಕೊಠಡಿಯಲ್ಲಿದ್ದ ಯುವತಿ ಮೇಲೆ ಮಹೇಂದ್ರ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement
Advertisement

ಮರು ದಿನ ಬೆಳಗ್ಗೆ ಕೃತ್ಯದ ವಿಚಾರ ತಿಳಿದ ಮಂಜುನಾಥ್, ರಾಜ್‌ಕುಮಾರ್‌ಜತೆ ಸೇರಿ ಮಹೇಂದ್ರ ಮತ್ತು ತರುಣ್‌ನನ್ನು ಅಪಹರಿಸಿ ಹಲ್ಲೆ ನಡೆಸುವ ಯೋಜನೆ ರೂಪಿಸಿದ್ದಾರೆ. ಅದರಂತೆ ಅ.28 ರಂದು ಮುಂಜಾನೆ 3 ಗಂಟೆಯ ಸುಮಾರಿಗೆ 5 ಬೈಕ್ ಗಳಲ್ಲಿ ಬಂದಿದ್ದ ಆರೋಪಿಗಳು ಮನೆಯಲ್ಲಿದ್ದ ಮಹೇಂದ್ರ ಮತ್ತು ತರುಣ್‌ನನ್ನು ಅಪಹರಿಸಿ, ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಪುತ್ರ ಮಹೇಂದ್ರ ಅಪಹರಣ ವಾದ ವಿಚಾರ ತಿಳಿದು ಆತನ ತಂದೆ ಮಾರತ್ತಹಳ್ಳಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದ ಕೇವಲ 6 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಸೈದುಲ್ಲಾ ಅಡಾವತ್, ಎಸಿಪಿ ಎ.ಬಿ.ಸುಧಾಕರ್, ಠಾಣಾಧಿಕಾರಿ ಬಿ.ಎನ್.ಪುನೀತ್ ಹಾಗೂ ತಂಡ ಕಾರ್ಯಾಚರಣೆ ನಡೆಸಿದೆ.

ಅಪಹರಣ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದ್ದಾಗ ಯುವತಿಯ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತೆಯಿಂದ ಪ್ರತ್ಯೇಕ ದೂರು ದಾಖಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಮಹೇಂದ್ರ (23) ಮತ್ತು ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ತರುಣ್ (23)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page