ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಿಪಟೂರು ತಾಲೂಕಿನ ಕಸಬಾ ವಲಯದ ಗಾಂಧಿನಗರದ ನಿವಾಸಿ ಅಬ್ದುಲ್ ರಹೀಮ್ ರವರಿಗೆ ಬಾಯಿ ಕ್ಯಾನ್ಸರ್ ಆಗಿ ತೀವ್ರ ಅನಾರೋಗ್ಯಕೆ ಒಳಗಾಗಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಪರಮ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ರೂ 20,000/- ಮೊತ್ತದ ಸಹಾಯಧನದ ಮಂಜೂರಾತಿ ಪತ್ರವನ್ನು ತುಮಕೂರು 1 ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣರವರು ವಿತರಿಸಿ ಪೂಜ್ಯರು ನಮ್ಮ ಪಾಲುದಾರ ಬಂಧುಗಳು ಮತ್ತು ಅವರ ಮನೆಯವರ ಮಾರಣಾಂತಿಕ ಕಾಯಿಲೆ ಕಾನ್ಸರ್, ಹೃದಯ,ಮತ್ತು ಕಿಡ್ನಿ ಸಂಬಂಧಿ ಕಾಯಿಲೆಗಳಿಗೆ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಚತುರ್ ದಾನದಲ್ಲಿ ಔಷಧಿ ದಾನಕ್ಕೆ ಪೂರಕವಾಗಿ ಕ್ರಿಟಿಕಲ್ ಇಲ್ನೆಸ್ ಫಂಡ್ ಮೂಲಕ ವಿಶೇಷ ಸಹಾಯಧನವನ್ನು ಮಂಜೂರು ಮಾಡುತ್ತಿರುವುದು ನೋಂದವರ ಪಾಲಿಗೆ ಸಹಕಾರವಾಗುತ್ತಿದೆ ಎಂದರು.
ನಮ್ಮ ಪಾಲುದಾರ ಬಂಧುಗಳಿಗೆ ಹಾಗೂ ಅವರ ಮನೆಯವರಿಗೆ ಪ್ರತಿವರ್ಷ ಜನವರಿಯಲ್ಲಿ ಆರೋಗ್ಯ ರಕ್ಷಾ ಮತ್ತು ಸಂಪೂರ್ಣ ಸುರಕ್ಷಾ ನೊಂದಾವಣಿ ಮಾಡಲು ಅವಕಾಶವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾವಣೆ ಮಾಡಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭ ತಾಲೂಕು ಯೋಜನಾಧಿಕಾರಿ ಶ್ರೀ ಉದಯ್ ಕೆ ಅವರು ವಲಯ ಮೇಲ್ವಿಚಾರಕರು ಸ್ಥಳೀಯ ಸೇವಪ್ರತಿನಿಧಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
















