ಕೇದಾರನಾಥಕ್ಕೆ ಭೇಟಿ ನೀಡಿದ ಸಾರಾ ಆಲಿ ಖಾನ್‌ ವಿರುದ್ಧ ಫತ್ವಾ! ಹಿಂದು ಧಾರ್ಮಿಕ ಕ್ಷೇತ್ರದಲ್ಲಿ ಪೂಜೆ ಸಲ್ಲಿಕೆ ಹರಾಮ್‌ ಎಂದ ಮುಸ್ಲಿಂ ಧರ್ಮಗುರು!

ನಟಿ ಸಾರಾ ಅಲಿ ಖಾನ್‌ ವರ್ಷಕ್ಕೊಮ್ಮೆಯಾದರೂ ಕೇದಾರನಾಥ ಸ್ವಾಮಿಯ ದರುಶನ ಪಡೆಯುತ್ತಾರೆ. ಭೇಟಿ ಕೊಟ್ಟಾಗೆಲ್ಲವೂ ಕೇದಾರನಾಥದ ದೈವಿಕ ಅನುಭವಕ್ಕೆ ಮನಸೋತಿದ್ದೇನೆ. ಇದು ನನ್ನ ನೆಮ್ಮದಿಯ ತಾಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುತ್ತಾರೆ. ಈ ಬಾರಿ ದೇವಾಲಯಕ್ಕೆ ಭೇಟಿ ಕೊಟ್ಟಿರುವ ಕಾರಣ ಸಾರಾ ಅಲಿ ಖಾನ್‌ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ಜಾಲತಾಣ ಮೂಲಗಳು ತಿಳಿಸಿವೆ.

Advertisement

ಉತ್ತರ ಪ್ರದೇಶ ಮೂಲದ ಇಸ್ಲಾಮಿಕ್‌ ಧರ್ಮಗುರು ಮೌಲಾನಾ ಮುಫ್ತಿ ಶಹಾಬುದ್ದೀನ್‌ ರಜ್ವಿ ಬರೇಲಿ ಅವರು ಸಾರಾ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಇಸ್ಲಾಂ ಶರಿಯಾ ಕಾಯ್ದೆಯ ಪ್ರಕಾರ ಹಿಂದು ಧಾರ್ಮಿಕ ಕ್ಷೇತ್ರಕ್ಕೆ ತೆರಳಿ ಪೂಜೆ ಮಾಡುವುದು ಹರಾಮ್‌ ಎಂದು ಅವರು ಹೇಳಿದ್ದಾರೆ. ಐದು ದಿನಗಳ ಹಿಂದೆ ಸಾರಾ ಕೇದಾರನಾಥಕ್ಕೆ ಭೇಟಿ ನೀಡಿದ್ದರು. ಭಕ್ತರ ಜೊತೆಗೆ ನಿಂತು ದೇವರ ದರುಶನ ಪಡೆದಿದ್ದರು. ಹಣೆಗೆ ಕುಂಕುಮ ಇಟ್ಟು, ತಲೆಯ ಮೇಲೆ ಹೊದಿಕೆ ಹಾಕಿರುವ ಸಾರಾ ಅವರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಇದನ್ನು ಧರ್ಮಗುರು ಖಂಡಿಸಿದ್ದು, ಸಾರಾ ಈಕೂಡಲೇ ಅಲ್ಲಾನಲ್ಲಿ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.

Advertisement
Advertisement

ಬದ್ರಿನಾಥ್‌ ಹಾಗೂ ಕೇದಾರನಾಥ ದೇವಾಲಯ ಸಮಿತಿಯು ಅನ್ಯಧರ್ಮೀಯರು ದೇಗುಲಕ್ಕೆ ಆಗಮಿಸಬೇಕು ಎಂದರೆ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಸಾರಾ ಅಲಿ ಖಾನ್‌ ಅವರ ತಂಡ ದೇವಾಲಯದ ಪ್ರವೇಶಕ್ಕೂ ಮುನ್ನವೇ ಪ್ರಮಾಣಪತ್ರವನ್ನು ಸಲ್ಲಿದೆ ಎಂದು ಸಮಿತಿ ಹೇಳಿದೆ. ಕೆಲವರು ಸಾರಾ ಅವರನ್ನು ಬೆಂಬಲಿಸಿದರೆ ಹಲವರು ಇದನ್ನು ತಪ್ಪು ಎಂದಿದ್ದಾರೆ ಎಂದು ತಿಳಿದು ಬಂದಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page