ವಿಶ್ವದ ಅತೀ ಹೆಚ್ಚು ಮಳೆ ಬೀಳುವ ಜಾಗದಲ್ಲೇ ಮುಂಗಾರು ಅಭಾವ!! ಈಗ ಹೇಗಿದೆ ಗೊತ್ತಾ ಚಿರಾಪುಂಜಿ??

ವಿಶ್ವದಲ್ಲೇ ಅತೀ ಹೆಚ್ಚು ತೇವಾಂಶವುಳ್ಳ ಪ್ರದೇಶ ಮೇಘಾಲಯದ ಚಿರಾಪುಂಜಿಯಲ್ಲಿಯೂ ಈ ವರ್ಷ ಮುಂಗಾರು ಅಭಾವ ಉಂಟಾಗಿದೆ. ಚಿರಾಪುಂಜಿ ಮಾತ್ರವಲ್ಲದೇ ಈಶಾನ್ಯದ ಏಳೂ ರಾಜ್ಯಗಳಲ್ಲಿ ಈ ವರ್ಷ ಮಳೆ ಕೊರತೆ ಉಂಟಾಗಿದೆ ಎಂದು ವರದಿಯಾಗಿದೆ.

Advertisement

ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಈಶಾನ್ಯದ 7ರಾಜ್ಯಗಳ ಪೈಕಿ ಮೇಘಾಲಯ ಅತೀ ಹೆಚ್ಚು ಮಳೆ ಕೊರತೆ ಪರಿಣಾಮಕ್ಕೋಳಗಾದ ರಾಜ್ಯವಾಗಿದೆ. ಈ ವರ್ಷ ಮೇಘಾಲಯದಲ್ಲಿ ಶೇ. 85 ರಷ್ಟು ಮಳೆ ಕೊರತೆ ಉಂಟಾಗಿದೆ. ಇನ್ನು ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಲ್ಲಿ ಶೇ. 74 ರಷ್ಟು ಕೊರತೆ ಉಂಟಾಗಿದೆ. ಅಕ್ಟೋಬರ್‌ನಲ್ಲಿ ಸರಾಸರಿ 255 ಮಿ.ಮೀ ಮಳೆಯಾಗುವ ಮೇಘಾಲಯದಲ್ಲಿ ಈ ವರ್ಷ ಕೇವಲ 38.3 ಮಿ.ಮೀ. ಮಳೆಯಾಗಿದೆ.

Advertisement

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page