ಮೈಸೂರು ಅರಮನೆ ನಮ್ಮ ಖಾಸಗಿ ಸ್ವತ್ತು!! ಸರ್ಕಾರದಿಂದ ನಮ್ಮ ಪರಂಪರೆಗೆ ಧಕ್ಕೆಯೆಂದ ರಾಜಮಾತೆ!!

ಮೈಸೂರು ಅರಮನೆಯನ್ನು ಯಾವ ಸರ್ಕಾರವೂ ಕಟ್ಟಿಸಿಕೊಟ್ಟಿಲ್ಲ. ಇದು ನಮ್ಮ ಖಾಸಗಿ ಸ್ವತ್ತು. ಸರ್ಕಾರದ ಔದಾರ್ಯದಿಂದ ನಾವು ಅರಮನೆಯಲ್ಲಿ ವಾಸ ಮಾಡುತ್ತಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ಇಲ್ಲಿದ್ದೇವೆ ಎಂದು ಪ್ರಮೋದಾದೇವಿ ಒಡೆಯರ್‌ ಹೇಳಿದ್ದಾರೆ. ಮೈಸೂರು ಅರಮನೆ ಸರ್ಕಾರದ್ದೋ ಅಲ್ಲವೋ ಎನ್ನು ವಿಷಯಗಳು ಮುನ್ನಲೆಗೆ ಬಂದಿದ್ದು, ಅರಮನೆ ಮಾಲೀಕತ್ವ ಹಾಗೂ ನಿರ್ವಹಣೆ ವಿಚಾರವಾಗಿ ಸ್ಪಷ್ಟತೆಯಿಂದ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಅರಮನೆ ನಿರ್ವಹಣೆಗೆ ಆಡಳಿತ ಮಂಡಳಿಯನ್ನು ರಚನೆ ಮಾಡಲಾಗಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇವೆ. ವಿಚಾರಣೆಯಲ್ಲಿದೆ. ನಾವು ಸರ್ಕಾರದ ವಿಶೇಷ ಅನುಗ್ರಹದಿಂದ ಇಲ್ಲಿ ವಾಸ ಇಲ್ಲ ಎಂದು ಹೇಳಿದ್ದಾರೆ. ಅಂಬಾರಿಗೆ ನಮಗೆ ಯಾವುದೇ ರೀತಿ ಬಾಡಿಗೆ ನೀಡುತ್ತಿಲ್ಲ. ಆದರೆ ಅಂಬಾರಿ ಇಟ್ಟುಕೊಂಡು ಟಿಕೆಟ್‌ ಪಡೆದು ಹಣ ಸಂಪಾದಿಸಿಕೊಳ್ಳುತ್ತಿದ್ದಾರೆ. ಅಂಬಾರಿ ಇಟ್ಟುಕೊಂಡು ಪ್ರಚಾರ ಮಾಡ್ತಿದ್ದಾರೆ. ಇದಕ್ಕಾಗಿ ಹಣ ನೀಡುತ್ತಾರೆ, ಆದರೆ ಅದನ್ನು ಬಾಡಿಗೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಂಬಾರಿ ಹಾಗೂ ಸಿಂಹಾಸನ ಹಿಂದೆಯೂ ನಮ್ಮ ವಶದಲ್ಲಿತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

Advertisement

ಅಂಬಾರಿಗೆ ಗೌರವಧನ ನೀಡಿದ್ದಾರೆ. ಎಷ್ಟು ಎಂದು ಹೇಳೋಕೆ ಸಾಧ್ಯವಿಲ್ಲ. ಸರ್ಕಾರ ಇನ್ನೊಂದು ಅಂಬಾರಿ ಮಾಡಿಸಿಕೊಳ್ಳಲಿ ನಾನು ಬೇಡ ಅನ್ನೋದಿಲ್ಲ. ನಮ್ಮ ಅಂಬಾರಿಯನ್ನು ಹೊರುವ ಆನೆಯ ಬಗ್ಗೆ ತಿಳಿದುಕೊಳ್ಳಲು ನಮಗೆ ಹಕ್ಕು ಇಲ್ವಾ? ಖಂಡಿತ ಇದೆ. ಅಂಬಾರಿಯ ಮಾಲೀಕರಾದ ನಮಗೆ ಯಾವ ಆನೆ ಇದನ್ನು ಹೊರುತ್ತದೆ ಎಂದು ಕೇಳುವ ಹಕ್ಕಿದೆ. ಎಲ್ಲದಕ್ಕೂ ಶಿಷ್ಟಾಚಾರ ಇರೋದಿಲ್ಲ. ನಂಬಿಕೆ, ಸಹಕಾರ ಹಾಗೂ ತಿಳಿವಳಿಕೆಯಿಂದಲೂ ವಿಷಯಗಳು ನಡೆಯುತ್ತವೆ. ಅಂಬಾರಿ ಹೊರುವ ಆನೆ ಯಾವುದು ಎಂದು ದಸರಾಗೆ ಐದು ದಿನ ಬಾಕಿ ಇರುವಾಗ ಹೇಳಿದ್ದಾರೆ. ನಾನು ಅದರ ಮೇಲೆ ಭರವಸೆ ಇಡೋದು ಹೇಗೆ? ಸಣ್ಣ ಸಮಸ್ಯೆಯಾದರೂ ವರ್ಷಗಳ ನಮ್ಮ ಪರಂಪರೆಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page