ವಿಶ್ವದಲ್ಲೇ ಅತೀ ಹೆಚ್ಚು ತೇವಾಂಶವುಳ್ಳ ಪ್ರದೇಶ ಮೇಘಾಲಯದ ಚಿರಾಪುಂಜಿಯಲ್ಲಿಯೂ ಈ ವರ್ಷ ಮುಂಗಾರು ಅಭಾವ ಉಂಟಾಗಿದೆ. ಚಿರಾಪುಂಜಿ ಮಾತ್ರವಲ್ಲದೇ ಈಶಾನ್ಯದ ಏಳೂ ರಾಜ್ಯಗಳಲ್ಲಿ ಈ ವರ್ಷ ಮಳೆ ಕೊರತೆ ಉಂಟಾಗಿದೆ ಎಂದು ವರದಿಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಈಶಾನ್ಯದ 7ರಾಜ್ಯಗಳ ಪೈಕಿ ಮೇಘಾಲಯ ಅತೀ ಹೆಚ್ಚು ಮಳೆ ಕೊರತೆ ಪರಿಣಾಮಕ್ಕೋಳಗಾದ ರಾಜ್ಯವಾಗಿದೆ. ಈ ವರ್ಷ ಮೇಘಾಲಯದಲ್ಲಿ ಶೇ. 85 ರಷ್ಟು ಮಳೆ ಕೊರತೆ ಉಂಟಾಗಿದೆ. ಇನ್ನು ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಲ್ಲಿ ಶೇ. 74 ರಷ್ಟು ಕೊರತೆ ಉಂಟಾಗಿದೆ. ಅಕ್ಟೋಬರ್ನಲ್ಲಿ ಸರಾಸರಿ 255 ಮಿ.ಮೀ ಮಳೆಯಾಗುವ ಮೇಘಾಲಯದಲ್ಲಿ ಈ ವರ್ಷ ಕೇವಲ 38.3 ಮಿ.ಮೀ. ಮಳೆಯಾಗಿದೆ.














