ಬಾಲಿವುಡ್‌ನಿಂದ ಪ್ರಧಾನಿ ಮೋದಿಗೆ ತುರ್ತು ಪತ್ರ! ಭಯದಲ್ಲೇ ಬದುಕುತ್ತಿರುವ ಸ್ಟಾರ್‌ ನಟರು!!

ಮುಂಬೈನ ಜುಹುದಲ್ಲಿರುವ ತಮ್ಮ ಪ್ರಸಿದ್ಧ ʼಜಲ್ಸಾʼ ನಿವಾಸದ ಹೊರಗಡೆ ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿಯಾಗುವುದು ಅಮಿತಾಭ್‌ ಬಚ್ಚನ್‌ ಅವರ ನಾಲ್ಕು ದಶಕಗಳ ಅಭ್ಯಾಸ. ಆದರೆ, ಇತ್ತೀಚೆಗೆ 84 ವರ್ಷದ ಅಮಿತಾಭ್‌ ಅವುರು ಬುಲೆಟ್‌ಪ್ರೂಫ್‌ ಗ್ಲಾಸ್‌ ತಡೆಗೋಡೆಯ ಹಿಂಬಾಗದಲ್ಲಿ ನಿಂತು ಅಭಿಮಾನಿಗಳಿಗೆ ಕೈಬೀಸಿರುವುದು ಇಡೀ ಚಲನ ಚಿತ್ರ ರಂಗವನ್ನೇ ಬೆಚ್ಚಿಬೀಳಿಸಿದೆ ಎಂದು ವರದಿಯಾಗಿದೆ.

Advertisement

ದೇಶ-ವಿದೇಶಗಳಿಂದ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಮುಂಬೈಗೆ ಆಗಮಿಸುತ್ತಾರೆ. ಪ್ರಮುಖ ನಾಯಕರು ಬುಲೆಟ್‌ಪ್ರೂಫ್‌ ಕಾರುಗಳಲ್ಲಿ ಸಂಚರಿಸುವುದನ್ನು ದೇಶ ಕಂಡಿದೆ. ಆದರೆ, ನಟನೊಬ್ಬ ತನ್ನ ಸ್ವಂತ ನಗರದಲ್ಲೇ ಅಭಿಮಾನಿಗಳನ್ನು ಭೇಟಿಯಾಗಲು ಬುಲೆಟ್‌ಪ್ರೂಫ್‌ ಗ್ಲಾಸ್‌ ತಡೆಗೋಡೆ ನಿರ್ಮಿಸಿಕೊಂಡ ಉದಾಹರಣೆ ಬಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇಲ್ಲ. ಈ ಘಟನೆಯು ಚಿತ್ರರಂಗದ ತಾರೆಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ ಎಂದು ಜಾಲತಾಣ ಮೂಲಗಳು ಹೇಳಿವೆ.

Advertisement

ಇತ್ತೀಚೆಗೆ ಗ್ಯಾಂಗ್‌ಸ್ಟರ್‌ಗಳ ದಾಳಿ ಹಾಗೂ ಸುಲಿಗೆ ಯತ್ನಗಳ ಸರಣಿ ಘಟನೆಗಳು ಬಾಲಿವುಡ್‌ನಲ್ಲಿ ಹೆಚ್ಚುತ್ತಿವೆ. ನಟರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಭೀಕರ ಹತ್ಯೆ ಮತ್ತು ನಟ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿಕೊಂಡು ನಡೆದ ಗುಂಡಿನ ದಾಳಿ ಘಟನೆಗಳು ನಟ-ನಟಿಯರು ಹಾಗೂ ನಿರ್ಮಾಪಕರಲ್ಲಿ ಅಭದ್ರತೆಯ ವಾತಾವರಣವನ್ನು ಸೃಷ್ಟಿಸಿವೆ. ಈ ಸರಣಿ ಆತಂಕಕಾರಿ ಘಟನೆಗಳ ಬೆನ್ನಲ್ಲೇ ‘ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್’ ಅಧ್ಯಕ್ಷ ಸುರೇಶ್ ಶ್ಯಾಮ್ ಲಾಲ್ ಗುಪ್ತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುರ್ತು ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಘಟನೆಯನ್ನು ಉಲ್ಲೇಖಿಸಲಾಗಿದ್ದು, ಬಾಲಿವುಡ್ ಕಲಾವಿದರು, ನಿರ್ಮಾಪಕರು ಮತ್ತು ಅವರ ಕುಟುಂಬಗಳಿಗೆ ಗರಿಷ್ಠ ಮಟ್ಟದ ರಕ್ಷಣೆ ಒದಗಿಸಲು ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಲಾಗಿದೆ.

Share this article

Subscribe

By pressing the Subscribe button, you confirm that you have read our Privacy Policy.
Advertisement

More News

You cannot copy content of this page